ಲಿಂಗಪ್ಪ ಟಿ.ಸಾಲ್ಯಾನ್

Update: 2024-10-20 15:51 GMT

ಉಡುಪಿ, ಅ.20: ಮಣಿಪಾಲ ಎಂಐಟಿ ಕಾಲೇಜು ಸಮೀಪದ ನಿವಾಸಿ, ಪಿಟಿಐ ಸುದ್ದಿ ಸಂಸ್ಥೆಯಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಲಿಂಗಪ್ಪ ಟಿ. ಸಾಲ್ಯಾನ್(89) ಅ.20ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಲಿಂಗಪ್ಪಪಿಟಿಐ ಸುದ್ದಿ ಸಂಸ್ಥೆಯ ಮುಂಬಯಿ ಕಚೇರಿಯಲ್ಲಿ ಸೇವೆಗೆ ಸೇರಿದ್ದು, ಬಳಿಕ ಅಹಮದಾಬಾದ್, ಬೆಳಗಾವಿ, ಚೆನ್ನೈ, ಕೋಯಿಕ್ಕೊಡ್ ಮುಂತಾದೆಡೆ ಸೇವೆ ಸಲ್ಲಿಸಿದ್ದರು. ಉದಯವಾಣಿ ಆರಂಭದ ಕಾಲದಲ್ಲಿ ಮಣಿಪಾಲದಲ್ಲಿ ಪಿಟಿಐ ಕಚೇರಿ ಆರಂಭವಾದಾಗ ಅದರ ಉಸ್ತುವಾರಿ ಆಗಿ ನಿಯುಕ್ತಿಗೊಂಡು, ನಿವೃತ್ತಿಯವರೆಗೂ ಇಲ್ಲೆ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಕೆನರಾ ಬ್ಯಾಂಕ್ ಅಧಿಕಾರಿ ಶಾಲಿನಿ ಶ್ರಿಧರ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್