ಕುಂಞಿ ಬ್ಯಾರಿ

Update: 2024-10-23 14:52 GMT

ಮಂಗಳೂರು: ವಿಟ್ಲ ಸಮೀಪದ ನೆತ್ತರಕರೆ ನಿವಾಸಿ ಕುಂಞಿಬ್ಯಾರಿ (98) ಮಂಗಳವಾರ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು.

ಮೂವರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಮೃತರು ಅಗಲಿದ್ದಾರೆ.

ಮೂಲತಃ ಸಾಲೆತ್ತೂರು ಸಮೀಪದ ಮುಂಡಾಜೆಯವರಾದ ಇವರು ಬೈಹುಲ್ಲಿನ ವ್ಯಾಪಾರಿಯಾಗಿದ್ದರು. ವಿಟ್ಲದಲ್ಲಿ ಹೈನೋದ್ಯಮಕ್ಕೆ ಆರಂಭಿಕ ತಳಪಾಯ ಹಾಕಿದ ಪ್ರಮುಖರಲ್ಲಿ ಓರ್ವರು. ಸ್ಥಳೀಯವಾಗಿ ಕುಂಞಿಚ್ಚ ಎಂದೇ ಜನಪ್ರಿಯರಾಗಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್