ಉಪ್ಪಿನಂಗಡಿ: ಮುಹಮ್ಮದ್ ಕೊಪ್ಪಳ ನಿಧನ
Update: 2024-12-02 09:15 GMT
ಉಪ್ಪಿನಂಗಡಿ: ಇಲ್ಲಿನ ಕೊಪ್ಪಳ ನಿವಾಸಿ, ಕೋಫಿಯಾ ಹೊಟೇಲ್ ಮಾಲಕರಾದ ಮುಹಮ್ಮದ್ ಕೊಪ್ಪಳ (63) ಭಾನುವಾರ ತಡರಾತ್ರಿ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೆಂಪಿಮಜಲಿನಲ್ಲಿರುವ ಇವರ ಹೊಟೇಲಿನಲ್ಲಿ ನಿನ್ನೆ ರಾತ್ರಿ ಕೆಲಸ ಮಾಡುತ್ತಿದ್ದ ಸಂದರ್ಭ ಇವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಮಂಗಳೂರಿಗೆ ಚಿಕಿತ್ಸೆಗೆಂದು ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರು ಸುಮಾರು 13 ವರ್ಷದಿಂದ ಉಪ್ಪಿನಂಗಡಿ ಗ್ರಾ.ಪಂ. ನಲ್ಲಿ ನೀರು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು.
ಮೃತರು ಪತ್ನಿ ಐವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.