ವಿಶ್ವಕಪ್ : ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಕಿವೀಸ್
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮುಹಮ್ಮದ್ ಶಮಿ ಆರಂಭಿಕ ಬೌಲಿಂಗ್ ದಾಳಿಯ ಆಘಾತದ ನಡುವೆಯೂ ನ್ಯೂಝಿಲ್ಯಾಂಡ್ ಚೇತರಿಕೊಂಡಿದೆ.
ಭಾರತ ನೀಡಿದ 398 ರನ್ ಗುರಿ ಬೆನ್ನತ್ತಲು ಸ್ಟೋಟಕ ಆರಂಭದ ನಿರೀಕ್ಷೆಯಲ್ಲಿದ್ದ ಕಿವೀಸ್ ಗೆ ಮುಹಮ್ಮದ್ ಶಮಿ ಆಘಾತ ನೀಡಿದರು. ನ್ಯೂಝಿಲ್ಯಾಂಡ್ ಓಪನರ್ ಗಳಾದ ಡೆವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಕ್ರಮವಾಗಿ 13 ರನ್ ಗೆ ಮುಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತು ಔಟ್ ಆದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆರಲ್ ಮಿಚೆಲ್ ಜೋಡಿ, ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಕೊಂಚ ಚೇತರಿಕೆ ನೀಡುವಲ್ಲಿ ಯಶಸ್ವಿ ಯಾದರು. ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಲಿಯಮ್ಸನ್ 41 ರನ್ ಗಳಿಸಿದರೆ ಡರೆಲ್ ಮಿಚೆಲ್ 32 ರನ್ ಬಾರಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ನ್ಯೂಝಿಲ್ಯಾಂಡ್ ಗೆಲುವಿಗೆ 27.3 ಓವರ್ ಗಳಲ್ಲಿ 255 ರನ್ ಗಳ ಅಗತ್ಯವಿದೆ.