ಮೆಸ್ಸಿ ಕೈಯಲ್ಲಿ ನವಜಾತ ಶಿಶು ಯಮಲ್!

Update: 2024-08-21 06:23 GMT

PC : X

ಹೊಸದಿಲ್ಲಿ : ಹದಿನೇಳು ವರ್ಷಗಳ ಹಿಂದೆ ತೆಗೆದ ಚಿತ್ರವೊಂದು ಈಗ ಬಾರ್ಸಿಲೋನದ ಛಾಯಾಚಿತ್ರಗಾರ ಜೋನ್ ಮೋನ್‌ಫೋರ್ಟ್‌ರ ಬದುಕನ್ನೇ ಬದಲಾಯಿಸಿದೆ. ಮೋನ್‌ಫೋರ್ಟ್ 30 ವರ್ಷಗಳಿಂದ ಸ್ಪೇನ್‌ನಾದ್ಯಂತ ನಡೆಯುವ ಕ್ರೀಡಾಕೂಟಗಳಲ್ಲಿ ಚಿತ್ರಗಳನ್ನು ತೆಗೆಯುತ್ತಾ ಬಂದಿದ್ದಾರೆ. 2007ರಲ್ಲಿ ಅವರು ತೆಗೆದಿರುವ ಚಿತ್ರಕ್ಕಾಗಿ ಅವರೀಗ ಜಗತ್ಪ್ರಸಿದ್ಧರಾಗಿದ್ದಾರೆ.

ಯೂನಿಸೆಫ್ ಮತ್ತು ಬಾರ್ಸಿಲೋನ ಫುಟ್ಬಾಲ್ ಕ್ಲಬ್‌ಗಳ ನಿಧಿ ಸಂಗ್ರಹ ಕಾರ್ಯಕ್ರಮವೊಂದರಲ್ಲಿ, ಮೋನ್‌ಫೋರ್ಟ್ ಆಗ 20 ವರ್ಷದ ಲಿಯೊನೆಲ್ ಮೆಸ್ಸಿ ಆಗ ತಾನೇ ಹುಟ್ಟಿದ ಮಗುವೊಂದನ್ನು ಹಿಡಿದುಕೊಂಡಿರುವ ಚಿತ್ರವೊಂದನ್ನು ತೆಗೆದಿದ್ದರು. ಸ್ನಾನದ ತೊಟ್ಟಿಯ ಪಕ್ಕದಲ್ಲಿ ಮಗುವಿನ ತಾಯಿಯೊಂದಿಗೆ ಮೆಸ್ಸಿ ನಿಂತಿರುವ ಚಿತ್ರವನ್ನೂ ಅವರು ಈ ಸಂದರ್ಭದಲ್ಲಿ ತೆಗೆದಿದ್ದರು.

ಮೆಸ್ಸಿ ತನ್ನ ಕೈಯಲ್ಲಿ ಹಿಡಿದುಕೊಂಡಿರುವ ಆ ಮಗು ಲಮಿನ್ ಯಮಲ್ ಎನ್ನುವುದು ಈಗ ಬಹಿರಂಗವಾಗಿದೆ. ಲಮಿನ್ ಯಮಲ್ ಸ್ಪೇನ್‌ನ ಹದಿಹರಯದ ಫುಟ್ಬಾಲ್ ಮಾಂತ್ರಿಕನಾಗಿದ್ದಾರೆ. ಅವರು ಜುಲೈ 13ರಂದು 17ನೇ ವರ್ಷಕ್ಕೆ ಕಾಲಿರಿಸಿದರು.

ಯಮಲ್ ಯುರೋ 2024ರಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಅವರು ಬಾರಿಸಿರುವ ಅಮೋಘ ಗೋಲು ಅವರನ್ನು ಜಾಗತಿಕ ಪ್ರಸಿದ್ಧಿಗೆ ತಳ್ಳಿದೆ.

ಮಗುವಿಗೆ ಸ್ನಾನಮಾಡಿಸುವ ವೇಳೆ ಅದರತ್ತ ನೋಡುತ್ತಾ ಮಗುವಿನ ತಾಯಿ ಮತ್ತು ಮೆಸ್ಸಿ ಮುಗುಳು ನಗುವುದನ್ನು ತೋರಿಸುವ ಚಿತ್ರವನ್ನು ಮೆಸ್ಸಿಯ ತಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘‘ಇಬ್ಬರು ದಂತಕತೆಗಳ ಆರಂಭ’’ ಎಂಬ ಶೀರ್ಷಿಕೆಯ ಆ ಚಿತ್ರ ಈಗ ವಿಶ್ವಾದ್ಯಂತ ವೈರಲ್ ಆಗಿದೆ.

PC : msn.com

 

PC : msn.com

 

PC : msn.com

 

PC : UEFA VIA

 

PC : UEFA VIA

 

 

‘‘ಜುಲೈ ತಿಂಗಳ ಆರಂಭದಲ್ಲಿ, ‘ಸ್ಪೋರ್ಟ್’ ಪತ್ರಿಕೆಯಲ್ಲಿ ಕೆಲಸ ಮಾಡುವ ನನ್ನ ಸಹೋದ್ಯೋಗಿಯೊಬ್ಬರು ರಾತ್ರಿ 12 ಗಂಟೆಗೆ ಪೋನ್ ಮಾಡಿ, ‘ಇದು ನಿಮ್ಮ ಚಿತ್ರವೇ?’ ಎಂದು ಕೇಳಿದರು. ‘ಹೌದು, ಇದು ನನ್ನ ಚಿತ್ರ. ಈ ಚಿತ್ರವನ್ನು ನಾನು ವರ್ಷಗಳ ಹಿಂದೆ ತೆಗೆದಿದ್ದೇನೆ’ ಎಂದು ಹೇಳಿದೆ. ‘ಆ ಮಗು ಯಾರು?’ ಎಂದು ನಾನು ಕೇಳಿದೆ. ಸಹೋದ್ಯೋಗಿ ಹೇಳಿದರು: ‘ಹೌದು, ಆ ಮಗು ಲಿಯೊನೆಲ್ ಮೆಸ್ಸಿ. ಮತ್ತು ಆ ಇನ್ನೊಂದು ಮಗು ಲಮಿನ್ ಯಮಲ್’’’ ಎಂದು ಸಿಎನ್‌ಎನ್ ಜೊತೆಗೆ ಮಾತನಾಡುತ್ತಾ ಮೋನ್‌ಫೋರ್ಟ್ ಹೇಳಿದ್ದಾರೆ.

ಈ ಫೋನ್ ಕರೆಗಿಂತ ಮೊದಲು, ನಾನು ಆ ಚಿತ್ರವನ್ನೇ ಮರೆತಿದ್ದೆ ಹಾಗೂ ಮೆಸ್ಸಿ ಜೊತೆಗಿದ್ದ ಆ ಮಗು ಯಾರು ಎನ್ನುವ ಕಲ್ಪನೆಯೇ ಇರಲಿಲ್ಲ ಎಂದು ಮೋನ್‌ಫೋರ್ಟ್ ಹೇಳಿದರು.

ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ಯಮಲ್‌ರ ಕುಟುಂಬವು ಅದೃಷ್ಟ ಚೀಟಿಯಲ್ಲಿ ಗೆದ್ದಿತ್ತು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News