ರಶ್ಯ ರಾಯಭಾರಿಗೆ ದಕ್ಷಿಣ ಕೊರಿಯಾ ಸಮನ್ಸ್

Update: 2024-06-21 16:40 GMT

ಸಿಯೋಲ್ : ಉತ್ತರ ಕೊರಿಯಾ- ರಶ್ಯ ರಕ್ಷಣಾ ಒಪ್ಪಂದದಿಂದ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ದಕ್ಷಿಣ ಕೊರಿಯಾ, ಶುಕ್ರವಾರ ರಶ್ಯದ ರಾಯಭಾರಿಯನ್ನು ಕರೆಸಿಕೊಂಡು ಆಕ್ಷೇಪ ಸೂಚಿಸಿದೆ ಎಂದು ವರದಿಯಾಗಿದೆ.

ಪರಸ್ಪರ ರಕ್ಷಣೆಗೆ ನೆರವಾಗುವ ಬದ್ಧತೆಯನ್ನು ಹೊಂದಿರುವ ಒಪ್ಪಂದಕ್ಕೆ ಮಂಗಳವಾರ ರಶ್ಯ ಮತ್ತು ಉತ್ತರ ಕೊರಿಯಾ ಸಹಿ ಹಾಕಿವೆ. ಈ ಬಗ್ಗೆ ಅಸಮಾಧಾನ ಸೂಚಿಸಿರುವ ದಕ್ಷಿಣದ ಕೊರಿಯಾದ ವಿದೇಶಾಂಗ ಇಲಾಖೆ, ರಶ್ಯದ ರಾಯಭಾರಿ ಜಾರ್ಜಿ ಝಿನೊವೆವ್‍ರನ್ನು ಕರೆಸಿಕೊಂಡು ಆಕ್ಷೇಪವನ್ನು ಸಲ್ಲಿಸಿದೆ. ಈ ಮಧ್ಯೆ, ಗುರುವಾರ ದಕ್ಷಿಣ ಕೊರಿಯಾದ ಕಾರ್ಯಕರ್ತರು ಉತ್ತರ ಕೊರಿಯಾದ ಸರಕಾರ ವಿರೋಧಿ ಕರಪತ್ರಗಳನ್ನು ಹೊಂದಿದ್ದ ಬಲೂನುಗಳನ್ನು ಗಡಿಯುದ್ಧಕ್ಕೂ ಹಾರಿಸಿದ್ದು ಇದಕ್ಕೆ ಪ್ರತೀಕಾರ ಕೈಗೊಳ್ಳುವುದಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಸಹೋದರಿ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News