ಕೆನಡಾ |ಶಾಲೆಯ ಬಳಿ ಶೂಟೌಟ್ ; 3 ಮಂದಿ ಮೃತ್ಯು

Update: 2024-06-18 15:47 GMT

ಸಾಂದರ್ಭಿಕ ಚಿತ್ರ

ಟೊರಂಟೊ: ಕೆನಡಾದ ಟೊರಂಟೊದಲ್ಲಿ ಶಿಶುವಿಹಾರ ಕೇಂದ್ರ ಹಾಗೂ ಪ್ರಾಥಮಿಕ ಶಾಲೆಯೊಂದರ ಬಳಿ ನಡೆದ ಗುಂಡಿನ ದಾಳಿಯಲ್ಲಿ ಶಂಕಿತ ಆರೋಪಿಯ ಸಹಿತ 3 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಓರ್ವ ಮಹಿಳೆ ಹಾಗೂ ಪುರುಷನ ನಡುವೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಆರಂಭವಾದ ವಾಗ್ವಾದ ವಿಕೋಪಕ್ಕೆ ತಿರುಗಿ ಗುಂಡಿನ ದಾಳಿಯಲ್ಲಿ ಅಂತ್ಯಗೊಂಡಿದೆ. ಇಬ್ಬರೂ ಸಾವನ್ನಪ್ಪಿದ್ದು ಮತ್ತೊಬ್ಬ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದಿಲ್ಲ. ಶಿಶುವಿಹಾರ ಅಥವಾ ಶಾಲೆಯ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಶಿಕ್ಷಣ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News