ಇಸ್ರೇಲ್‍ನ ಹೈಫಾ ಬಂದರಿನಲ್ಲಿದ್ದ 4 ಹಡಗುಗಳ ಮೇಲೆ ಹೌದಿಗಳ ದಾಳಿ: ವರದಿ

Update: 2024-06-23 17:06 GMT

ಸಾಂದರ್ಭಿಕ ಚಿತ್ರ Photo : NDTV

ಸನಾ : ಇರಾಕ್‍ನ ಸಶಸ್ತ್ರ ಹೋರಾಟಗಾರರ ಗುಂಪಿನ ಜತೆ ಜಂಟಿಯಾಗಿ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಸ್ರೇಲ್‍ನ ಉತ್ತರದಲ್ಲಿರುವ ಹೈಫಾ ಬಂದರಿನಲ್ಲಿದ್ದ 4 ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಯೆಮನ್‍ನ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ರವಿವಾರ ಹೇಳಿದೆ.

ಹೈಫಾ ಬಂದರಿನಲ್ಲಿ ತಂಗಿದ್ದ ಎರಡು ಸಿಮೆಂಟ್ ಟ್ಯಾಂಕರ್ ಹಡಗು ಹಾಗೂ ಎರಡು ಸರಕು ನೌಕೆಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ಈ ಹಡಗುಗಳು ಆಕ್ರಮಿತ ಫೆಲೆಸ್ತೀನ್ ಪ್ರದೇಶದ ಬಂದರುಗಳನ್ನು ಪ್ರವೇಶಿಸುವುದಕ್ಕೆ ವಿಧಿಸಿದ್ದ ನಿಷೇಧವನ್ನು ಉಲ್ಲಂಘಿಸಿದೆ ಎಂದು ಹೌದಿ ಮಿಲಿಟರಿ ವಕ್ತಾರರು ಹೇಳಿದ್ದಾರೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದು ಎರಡೂ ಕಾರ್ಯಾಚರಣೆಗಳ ಉದ್ದೇಶ ಈಡೇರಿದೆ ಎಂದವರು ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News