ಇಥಿಯೋಪಿಯಾದಲ್ಲಿ ತುರ್ತು ಪರಿಸ್ಥಿತಿ ಜಾರಿ
Update: 2023-08-04 15:35 GMT
ಅದೀಸ್ ಅಬಾಬ: ಇಥಿಯೋಪಿಯಾದ ಅಮ್ಹಾರಾ ಪ್ರಾಂತದಲ್ಲಿ ಕಳೆದ ಹಲವು ದಿನಗಳಿಂದ ಸೇನೆ ಮತ್ತು ಸ್ಥಳೀಯ ಸಶಸ್ತ್ರ ಹೋರಾಟಗಾರರ ಗುಂಪಿನ ನಡುವೆ ಘರ್ಷಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ತುರ್ತು ಪರಿಸ್ಥಿತಿ ಜಾರಿಗೊಳಿಸಿರುವುದಾಗಿ ಫೆಡರಲ್ ಸರಕಾರ ಶುಕ್ರವಾರ ಘೋಷಿಸಿದೆ.
ಇಥಿಯೋಪಿಯಾದ 2ನೇ ಅತೀ ದೊಡ್ಡ ವಲಯವಾಗಿರುವ ಥಿಅಮ್ಹಾರಾ ಪ್ರಾಂತದಲ್ಲಿ ಈ ವಾರದ ಆರಂಭದಲ್ಲಿ ಫನೊ ಸಶಸ್ತ್ರ ಹೋರಾಟಗಾರರ ಗುಂಪು ಹಾಗೂ ರಾಷ್ಟ್ರೀಯ ಭದ್ರತಾ ಪಡೆಯ ನಡುವೆ ಆರಂಭಗೊಂಡ ಸಂಘರ್ಷ ತೀವ್ರರೂಪ ಪಡೆದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸೇನಾ ನೆರವಿಗೆ ಪ್ರಾಂತೀಯ ಸರಕಾರ ಬೇಡಿಕೆ ಸಲ್ಲಿಸಿತ್ತು.
ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಎಂದು ಪ್ರಧಾನಿಯ ಕಚೇರಿ ಹೇಳಿಕೆ ನೀಡಿದೆ.