ಇಸ್ರೇಲ್ ತಲುಪಿದ ಅಮೆರಿಕದ ಬೃಹತ್ ಎಂಕೆ-84 ಬಾಂಬ್‍ ಗಳು

Update: 2025-02-16 22:32 IST
ಇಸ್ರೇಲ್ ತಲುಪಿದ ಅಮೆರಿಕದ ಬೃಹತ್ ಎಂಕೆ-84 ಬಾಂಬ್‍ ಗಳು
  • whatsapp icon

ಜೆರುಸಲೇಂ: ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ರ ಅನುಮೋದನೆ ಪಡೆದ ಬಳಿಕ ಅಮೆರಿಕದ ಎಂಕೆ-84 ಬಾಂಬ್‍ಗಳು ಶನಿವಾರ ರಾತ್ರಿ ಇಸ್ರೇಲ್ ತಲುಪಿದೆ ಎಂದು ಇಸ್ರೇಲ್‍ ನ ರಕ್ಷಣಾ ಸಚಿವಾಲಯ ರವಿವಾರ ಹೇಳಿದೆ.

ಈ ಬೃಹತ್ ಬಾಂಬ್‍ ಗಳನ್ನು ಇಸ್ರೇಲ್‍ ಗೆ ರಫ್ತು ಮಾಡುವುದನ್ನು ಮಾಜಿ ಅಧ್ಯಕ್ಷ ಜೋ ಬೈಡನ್ ನಿಷೇಧಿಸಿದ್ದರು. ಹಾಲಿ ಅಧ್ಯಕ್ಷ ಟ್ರಂಪ್ ನಿಷೇಧವನ್ನು ತೆರವುಗೊಳಿಸಿದ ಬಳಿಕ ಇಸ್ರೇಲ್‍ ಗೆ ರವಾನೆಯಾಗಿದೆ ಎಂದು ಅಮೆರಿಕದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ರವಿವಾರ ಇಸ್ರೇಲ್ ತಲುಪಿದ್ದು ಇಸ್ರೇಲ್‍ ನ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಮ್ಯೂನಿಚ್ ಭದ್ರತಾ ಶೃಂಗಸಭೆಯಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಇಸ್ರೇಲ್‍ ನ ಟೆಲ್‍ ಅವೀವ್ ತಲುಪಿರುವ ರುಬಿಯೊ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಭೇಟಿಯಾಗಿ ಗಾಝಾ ಕದನ ವಿರಾಮದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಗಾಝಾದಲ್ಲಿ ಇಸ್ರೇಲ್‍ ನ ಮುಂದಿನ ನಡೆಗೆ ಅಮೆರಿಕದ ಸಂಪೂರ್ಣ ಬೆಂಬಲವಿದೆ. ಗಾಝಾದಲ್ಲಿ ಮುಂದಿನ ಕ್ರಮದ ಬಗ್ಗೆ ಇಸ್ರೇಲ್ ನಿರ್ಧರಿಸಲಿದೆ. ಅವರ ನಿರ್ಧಾರವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News