ಎರಡು ಪ್ರಕರಣಗಳಲ್ಲಿ ಇಮ್ರಾನ್‍ಖಾನ್ ಖುಲಾಸೆ

Update: 2024-06-03 16:28 GMT

 ಇಮ್ರಾನ್‍ಖಾನ್ | Photo: PTI

ಇಸ್ಲಾಮಾಬಾದ್ : ಮಾರ್ಚ್ 2022ರಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನಾ ರ‍್ಯಾಲಿ ಸಂದರ್ಭ ನಡೆದ ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಹಾಗೂ ಅವರ ಪಕ್ಷದ ಉನ್ನತ ಮುಖಂಡರನ್ನು ಇಸ್ಲಾಮಾಬಾದ್‍ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.

ಇಮ್ರಾನ್‍ಖಾನ್, ಮಾಜಿ ವಿದೇಶಾಂಗ ಸಚಿವ ಮಹ್ಮೂದ್ ಖುರೇಷಿ, ಮಾಜಿ ಮಾಹಿತಿ, ಸಂವಹನ ಸಚಿವ ಮುರಾದ್ ಸಯೀದ್ ಹಾಗೂ ಇತರ ಪಿಟಿಐ ಮುಖಂಡರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 71 ವರ್ಷದ ಇಮ್ರಾನ್‍ಖಾನ್ ಕಳೆದ ವರ್ಷದ ಆಗಸ್ಟ್ ನಿಂದ ಜೈಲಿನಲ್ಲಿದ್ದಾರೆ. 

ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News