2023ರಲ್ಲಿ ಭಾರತದ ಸಾಲವು 31 ಬಿಲಿಯನ್ ಡಾಲರ್ ನಿಂದ 647 ಬಿಲಿಯನ್ ಡಾಲರ್ ಗೆ ಏರಿಕೆ : ವಿಶ್ವಬ್ಯಾಂಕ್
ಹೊಸದಿಲ್ಲಿ: ವಿಶ್ವ ಬ್ಯಾಂಕ್ ಅಂತಾರಾಷ್ಟ್ರೀಯ ಸಾಲ ವರದಿಯ ಪ್ರಕಾರ, 2023ರಲ್ಲಿ ಭಾರತದ ಬಾಹ್ಯ ಸಾಲ 31 ಬಿಲಿಯನ್ ಡಾಲರ್ ನಿಂದ ರೂ. 647 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
2022ರಲ್ಲಿ 15.08 ಬಿಲಿಯನ್ ಡಾಲರ್ ನಷ್ಟಿದ್ದ ಬಡ್ಡಿ ಪಾವತಿ ಪ್ರಮಾಣವು, 2023ರಲ್ಲಿ 22.54 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
2023ರಲ್ಲಿ ದೀರ್ಘಾವಧಿ ಸಾಲಗಳ ಪ್ರಮಾಣ ಶೇ. 7ರಷ್ಟು ಏರಿಕೆಯಾಗಿದ್ದು, 498 ಬಿಲಿಯನ್ ಡಾಲರ್ ನಷ್ಟಿದ್ದರೆ, 2023ರಲ್ಲಿ ಅಲ್ಪಾವಧಿ ಸಾಲಗಳ ಪ್ರಮಾಣ ಕೊಂಚ ಮಟ್ಟಿಗೆ ಇಳಿಕೆಯಾಗಿದ್ದು, 126.32 ಬಿಲಿಯನ್ ಡಾಲರ್ ನಷ್ಟಿದೆ.
ವರದಿಯ ಪ್ರಕಾರ, 2023ರಲ್ಲಿ ಬಾಹ್ಯ ಸಾಲ ಪ್ರಮಾಣವು ಶೇಕಡಾವಾರು ರಫ್ತಿನ ಪೈಕಿ ಶೇ. 80ರಷ್ಟಿದ್ದು, ಸಾಲ ಸೇವೆಯು ರಫ್ತಿನ ಶೇ. 10ರಷ್ಟಿದೆ ಎಂದು ಹೇಳಲಾಗಿದೆ.
2023ರಲ್ಲಿ ನಿವ್ವಳ ಸಾಲದ ಒಳ ಹರಿವು 33.42 ಬಿಲಿಯನ್ ಡಾಲರ್ ಆಗಿದ್ದರೆ, ನಿವ್ವಳ ಈಕ್ವಿಟಿ ಒಳ ಹರಿವು ಹೆಚ್ಚಿದ್ದು, 46.94 ಬಿಲಿಯನ್ ಡಾಲರ್ ಆಗಿದೆ ಎಂದೂ 2024ರ ವಿಶ್ವ ಬ್ಯಾಂಕ್ ಅಂತಾರಾಷ್ಟ್ರೀಯ ಸಾಲ ವರದಿಯಲ್ಲಿ ಹೇಳಲಾಗಿದೆ.