ಬಿಬಿಸಿಯ ಅತ್ಯಂತ ಸ್ಫೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ವಿನೇಶ್ ಪೋಗಟ್ ಗೆ ಸ್ಥಾನ
ಹೊಸದಿಲ್ಲಿ : ಬಿಬಿಸಿಯ 2024ರ 100 ಅತ್ಯಂತ ಪ್ರಭಾವಶಾಲಿ ಹಾಗೂ ಸ್ಫೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಅರುಣ್ ರಾಯ್, ರಾಜಕಾರಣಿಯಾಗಿ ಬದಲಾದ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಅಂತ್ಯಕ್ರಿಯೆಯ ವಿಧಿ ನೆರವೇರಿಸುವ ಪೂಜಾ ಶರ್ಮಾ ಸೇರಿದ್ದಾರೆ.
ಅರುಣಾ ರಾಯ್ ಸರಕಾರದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಉತ್ತದಾಯಿತ್ವವನ್ನು ಪ್ರಭಾವಶಾಲಿಯಾಗಿ ಪ್ರತಿಪಾದಿಸುವುದರೊಂದಿಗೆ ದೀರ್ಘಕಾಲದಿಂದ ಸಾಮಾಜಿಕ ನ್ಯಾಯ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ.
ರಾಜಕಾರಣಿಯಾಗಿ ಬದಲಾದ ವಿನೇಶ್ ಫೋಗಟ್ ಮಾಜಿ ಕುಸ್ತಿ ಪಟು. ಅವರು ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೆ ಕ್ರೀಡೆಗಳಲ್ಲಿ ಉತ್ತಮ ನೀತಿಗಾಗಿ ಹೋರಾಡಿದ್ದಾರೆ.
ಅಂತ್ಯಕ್ರಿಯೆ ವಿಧಿಗಳಿಗೆ ಹೊಸ ವಿಧಾನವನ್ನು ಪರಿಚಯಿಸಿದ ಪೂಜಾ ಶರ್ಮಾ ಅವರು ಸಾವು ಹಾಗೂ ಶೋಕವನ್ನು ಸುತ್ತುವರಿದಿರುವ ಸಾಮಾಜಿಕ ನಿಯಮ ಹಾಗೂ ಪದ್ಧತಿಗಳನ್ನು ಮರು ವ್ಯಾಖ್ಯಾನಿಸಿದ್ದಾರೆ.
ಈ ಮೂವರು ಮಹಿಳೆಯರು ಗಗನ ಯಾತ್ರಿ ಸುನಿತಾ ವಿಲಿಯಂ, ಹಾಲಿವುಡ್ ನಟಿ ಶರೋನ್ ಸ್ಟೋನ್, ನೋಬೆಲ್ ಪುರಷ್ಕೃತೆ ನಾಡಿಯ ಮುರಾಡ್ ಹಾಗೂ ಪರಿಸರ ಹೋರಾಟಗಾತಿ ಅಡೆನಿಕಾ ಒಲಡೊಸು ಅವರಂತಹ ಅಂತಾರಾಷ್ಟ್ರೀಯ ವ್ಯಕ್ತಿಗಳನ್ನು ಒಳಗೊಂಡ ಸುಪ್ರಿಸಿದ್ಧರು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.