ಇಸ್ರೇಲ್ ಗೆ ಅಣು ಬಾಂಬ್ ದಾಳಿಯ ಎಚ್ಚರಿಕೆ ನೀಡಿದ ಇರಾನ್

Update: 2024-05-12 13:35 GMT

ಆಯತುಲ್ಲಾ ಅಲಿ ಖಾಮಿನೈ (Photo credit:X/@Khamenei_m)

ಟೆಹ್ರಾನ್: ಇಸ್ರೇಲ್ ನೊಂದಿಗಿನ ಪ್ರಕ್ಷುಬ್ಧತೆ ತೀವ್ರಗೊಳ್ಳುತ್ತಿದ್ದು, ಇರಾನ್ ನ ಪರಮಾಣು ಶಕ್ತಿ ಕುರಿತ ಮಹತ್ವಾಕಾಂಕ್ಷೆಗೆ ಇರಾನ್ ನ ಅತ್ಯುನ್ನತ ನಾಯಕ ಆಯತುಲ್ಲಾ ಅಲಿ ಖಾಮಿನೈಯವರ ಸಲಹೆಗಾರರೊಬ್ಬರು ಮತ್ತೊಮ್ಮೆ ಕಿಡಿ ಹಚ್ಚಿದ್ದಾರೆ. ಒಂದು ವೇಳೆ ಇರಾನ್ ನ ಅಸ್ತಿತ್ವಕ್ಕೆ ಇಸ್ರೇಲ್ ನಿಂದ ಬೆದರಿಕೆ ಇದೆ ಎಂದು ಕಂಡು ಬಂದರೆ, ಪರಮಾಣು ಕುರಿತ ತನ್ನ ನಿಲುವನ್ನು ಇರಾನ್ ಬದಲಿಸಿಕೊಳ್ಳಲಿದೆ ಎಂದು ಸಲಹೆಗಾರ ಕಮಲ್ ಖರ್ರಾಝಿ ಎಚ್ಚರಿಸಿದ್ದಾರೆ.

“ನಾವು ಪರಮಾಣು ಬಾಂಬ್ ತಯಾರಿಸುವ ಕುರಿತು ಯಾವುದೇ ನಿರ್ಧಾರ ಮಾಡಿಲ್ಲ. ಆದರೆ, ಇರಾನ್ ಅಸ್ತಿತ್ವಕ್ಕೇನಾದರೂ ಬೆದರಿಕೆ ಕಂಡು ಬಂದರೆ, ನಮ್ಮ ಸೇನಾ ನಿಲುವನ್ನು ಮಾರ್ಪಡಿಸಿಕೊಳ್ಳದೆ ಬೇರೆ ಆಯ್ಕೆಯಿಲ್ಲ” ಎಂದು ಖರ್ರಾಝಿ ಹೇಳಿದ್ದಾರೆ.

ಎಪ್ರಿಲ್ ತಿಂಗಳ ಆರಂಭದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿರುವ ತನ್ನ ದೂತಾವಾಸದ ಮೇಲೆ ನಡೆದ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ, ಇರಾನ್ ನೇರವಾಗಿ ಇಸ್ರೇಲ್ ಪ್ರಾಂತ್ಯವನ್ನು ಗುರಿಯಾಗಿಸಿಕೊಂಡು ಭಾರಿ ಪ್ರಮಾಣದ ಸ್ಫೋಟಕ ಡ್ರೋನ್ ಗಳು ಹಾಗೂ ಕ್ಷಿಪಣಿಗಳ ದಾಳಿ ನಡೆಸಿದ್ದರಿಂದ ಇರಾನ್ ಹಾಗೂ ಇಸ್ರೇಲ್ ನಡುವಿನ ಪ್ರಕ್ಷುಬ್ಧತೆ ವಿಕೋಪಕ್ಕೆ ತಲುಪಿದೆ.

“ನಮ್ಮ ಪರಮಾಣು ಸ್ಥಾವರಗಳ ಮೇಲೆ ಒಂದು ವೇಳೆ ಇಸ್ರೇಲ್ ದಾಳಿ ನಡೆಸಿದರೆ, ನಮ್ಮ ನಿಲುವು ಬದಲಾಗಲಿದೆ” ಎಂದೂ ಖರ್ರಾಝಿ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News