ಗಾಝಾದಿಂದ ಪ್ರಯೋಗಿಸಲಾದ ಮೂರು ಕ್ಷಿಪಣಿ ಹೊಡೆದುರುಳಿಸಿದ ಇಸ್ರೇಲ್
Update: 2025-03-22 21:10 IST

PC : ANI
ಟೆಲ್ಅವೀವ್: ದಕ್ಷಿಣದ ಅಷ್ಕೆಲಾನ್ ನಗರವನ್ನು ಗುರಿಯಾಗಿಸಿ ಶುಕ್ರವಾರ ಉತ್ತರ ಗಾಝಾದಿಂದ ಪ್ರಯೋಗಿಸಲಾದ ಮೂರು ಕ್ಷಿಪಣಿಗಳನ್ನು ತನ್ನ ವಾಯುಪಡೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಅಷ್ಕೆಲಾನ್ ನಲ್ಲಿ ಶುಕ್ರವಾರ ಸಂಜೆ ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ವಾಯುಪಡೆಯ ವಿಮಾನಗಳು ಉತ್ತರ ಗಾಝಾದಿಂದ ಪ್ರಯೋಗಿಸಲಾದ ಒಂದು ಕ್ಷಿಪಣಿಯನ್ನು ಹೊಡೆದುರುಳಿಸಿದೆ. ಉಳಿದ ಎರಡು ಕ್ಷಿಪಣಿ ಜನವಸತಿ ಇಲ್ಲದ ಪ್ರದೇಶದಲ್ಲಿ ಬಿದ್ದಿದ್ದು ಯಾವುದೇ ಸಾವು-ನೋವು, ನಾಶ-ನಷ್ಟ ವರದಿಯಾಗಿಲ್ಲ ಎಂದು ಮಿಲಿಟರಿಯ ಹೇಳಿಕೆ ತಿಳಿಸಿದೆ. ದಾಳಿಯ ಹೊಣೆಯನ್ನು ಹಮಾಸ್ ವಹಿಸಿಕೊಂಡಿದೆ. ಫೆಲಸ್ತೀನ್ ನಾಗರಿಕರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಇಸ್ರೇಲ್ ವಿರುದ್ಧ ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ ಎಂದು ಹಮಾಸ್ ಹೇಳಿದೆ.