ಬ್ರಿಟನ್: ಭಾರತೀಯ ಮೂಲದ ಒಬ್ಬರಿಗೆ ಮಾತ್ರ ಸ್ಟಾರ್ಮರ್‌ ಸಂಪುಟದಲ್ಲಿ ಸ್ಥಾನ

Update: 2024-07-07 05:24 GMT

Lisa Nandy (Photo: facebook.com/LisaNandyMP) 

ಲಂಡನ್: ಭಾರತೀಯ ಮೂಲದ ಸಂಸದೆ ಲಿಸಾ ನ್ಯಾಂಡಿ, ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ಸಂಪುಟದಲ್ಲಿ ಸ್ಥಾನ ಪಡೆದ ಭಾರತೀಯ ಮೂಲದ ಏಕೈಕ ಸಂಸದೆ ಎನಿಸಿಕೊಂಡಿದ್ದಾರೆ. ಭಾರತೀಯ ಮೂಲದ 19 ಮಂದಿ ಸಂಸದರಾಗಿ ಆಯ್ಕೆಯಾಗಿದ್ದರೂ, ಲೇಬರ್ ಪಕ್ಷ ಒಬ್ಬರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಕಲ್ಪಿಸಿದೆ.

ಇದಕ್ಕೆ ತದ್ವಿರುದ್ಧವಾಗಿ 2019ರ ಜುಲೈನಲ್ಲಿ ಬೋರಿಸ್ ಜಾನ್ಸನ್ ಅವರು ರಚಿಸಿದ್ದ ಬ್ರಿಟನ್ ಸಂಪುಟ ದೇಶದ ಇತಿಹಾಸದಲ್ಲೇ ಅತ್ಯಂತ ವೈವಿಧ್ಯಮಯ ಎನಿಸಿಕೊಂಡಿತ್ತು. ಏತನ್ಮಧ್ಯೆ ಕಾಶ್ಮೀರ ವಿಚಾರವಾಗಿ ಭಾರತ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಾ ಬಂದಿರುವ ಬ್ರಿಟಿಷ್ ಪಾಕಿಸ್ತಾನಿ ಸಂಸದೆ ಶಬಾನಾ ಮಹಮೂದ್ ಅವರನ್ನು ನ್ಯಾಯಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಮ್ಯಾಂಚೆಸ್ಟರ್ ನಲ್ಲಿ ಜನಿಸಿದ ಭಾರತೀಯ ಮೂಲದ ಲಿಸಾ ನ್ಯಾಂಡಿ ಸ್ಟರ್ಮೆರ್ ಅವರ ನಾಯಕತ್ವಕ್ಕೆ ನಿಕಟ ಪೈಪೋಟಿ ನೀಡಿದ್ದ ಲಿಸಾ (44) ಅವರನ್ನು ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಇದಕ್ಕೂ ಮುನ್ನ ಇವರು ಹಲವು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದ ಅವರು, ಛಾಯಾ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 2023ರ ಸೆಪ್ಟೆಂಬರ್ ನಲ್ಲಿ ಸ್ಟಾರ್ಮರ್‌ ಅವರು ಛಾಯಾ ಸಂಪುಟದಲ್ಲಿ ಲಿಸಾ ಅವರಿಗೆ ಹಿಂಬಡ್ತಿ ನೀಡಿ ಅಂತರರಾಷ್ಟ್ರೀಯ ಅಭಿವೃದ್ಧಿ ಹೊಣೆಯನ್ನು ವಹಿಸಿದ್ದರು. ಇವರ ತಂದೆ ದೀಪಕ್ ನ್ಯಾಂಡಿ ಕೊಲ್ಕತ್ತಾ ಸಂಜಾತರಾಗಿದ್ದು, ವೃತ್ತಿಯಲ್ಲಿ ಶಿಕ್ಷಣ ತಜ್ಞರು. 1976ರಲ್ಲಿ ಬ್ರಿಟನ್ನಲ್ಲಿ ಲೇಬರ್ ಪಕ್ಷಕ್ಕಾಗಿ ವರ್ಣ ಸಂಬಂಧ ಮಸೂದೆಯ ಕರಡು ಸಿದ್ಧಪಡಿಸಿದ್ದರು. ಇವರ ತಾಯಿ ಆ್ಯನ್ ಬೇಯರ್ಸ್ ಅವರು ಲಾರ್ಡ್ ಬೇಯರ್ಸ್ ಅವರ ಪುತ್ರಿ.

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News