ಪ್ರತೀಕಾರವನ್ನು ಯೋಜಿಸಿಲ್ಲ: ಇರಾನ್
Update: 2024-04-19 17:24 GMT
ಟೆಹ್ರಾನ್: ಇಸ್ಫಹಾನ್ ಪ್ರಾಂತದಲ್ಲಿ ಸಂಭವಿಸಿರುವ ಘಟನೆಯ ವಿದೇಶೀ ಮೂಲವನ್ನು ದೃಢೀಕರಿಸಲಾಗಿಲ್ಲ. ನಮ್ಮ ಮೇಲೆ ಯಾವುದೇ ಬಾಹ್ಯ ದಾಳಿ ನಡೆದಿಲ್ಲ. ಇದು ದಾಳಿಗಿಂತ ಒಳನುಸುಳುವಿಕೆಯ ಪ್ರಕರಣವಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ ತಕ್ಷಣ ಪ್ರತೀಕಾರವನ್ನು ಯೋಜಿಸಿಲ್ಲ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.
ಟೆಹ್ರಾನ್‍ನ ದಕ್ಷಿಣದಲ್ಲಿರುವ ಇಸ್ಫಹಾನ್ ಪ್ರಾಂತದ ಮೇಲಿನ ಡ್ರೋನ್ ದಾಳಿ ಹಾನಿ ಮಾಡುವ ಉದ್ದೇಶವಲ್ಲ, ಎಚ್ಚರಿಕೆ ಸಂದೇಶ ರವಾನಿಸುವ ಉದ್ದೇಶ ಹೊಂದಿದೆ ಎಂದು ಇಸ್ರೇಲ್‍ನ ಹಲವು ರಾಜಕೀಯ ಮುಖಂಡರು ಹೇಳಿರುವುದಾಗಿ ವರದಿಯಾಗಿದೆ. ಆದರೆ ಈ ದಾಳಿಯ ಹಿಂದೆ ಇಸ್ರೇಲ್ ಇರುವುದು ಸ್ಪಷ್ಟವಾಗಿಲ್ಲ. ಆದ್ದರಿಂದ ತಕ್ಷಣದ ಪ್ರತೀಕಾರ ಕ್ರಮವಿಲ್ಲ ಎಂದು ಇರಾನ್ ಪ್ರತಿಕ್ರಿಯಿಸಿದೆ.