ಪಾಕ್ ನೌಕಾಪಡೆಯ ಹೆಲಿಕಾಪ್ಟರ್ ಪತನ; ಮೂವರು ಮೃತ್ಯು

Update: 2023-09-04 22:55 IST
ಪಾಕ್ ನೌಕಾಪಡೆಯ ಹೆಲಿಕಾಪ್ಟರ್ ಪತನ; ಮೂವರು ಮೃತ್ಯು
  • whatsapp icon

ಇಸ್ಲಮಾಬಾದ್: ಪಾಕಿಸ್ತಾನದ ನೌಕಾಪಡೆಯ ಹೆಲಿಕಾಪ್ಟರ್ ನೈರುತ್ಯ ಪ್ರಾಂತದಲ್ಲಿ ಪತನಗೊಂಡಿದ್ದು ಹೆಲಿಕಾಪ್ಟರ್ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಯಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಸೇನೆ ಹೇಳಿದೆ.

ದಶಕಗಳಿಂದ ಪ್ರತ್ಯೇಕತಾವಾದಿ ಚಟುವಟಿಕೆ ತೀವ್ರಗೊಂಡಿರುವ ಬಲೂಚಿಸ್ತಾನ ಪ್ರಾಂತದ ಗ್ವದಾರ್ ಬಂದರು ನಗರದಲ್ಲಿ ತರಬೇತಿ ಹಾರಾಟದಲ್ಲಿದ್ದ ಹೆಲಿಕಾಪ್ಟರ್ ಪತನಗೊಂಡಿರುವುದಾಗಿ ನೌಕಾಪಡೆಯ ವಕ್ತಾರರು ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಟೇಕಾಫ್ ಆಗಿದ್ದ ಹೆಲಿಕಾಪ್ಟರ್ನ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಯಾಂತ್ರಿಕ ವೈಫಲ್ಯದಿಂದ ನಿಯಂತ್ರಣ ಕಳೆದುಕೊಂಡು ಪತನವಾಗಿದೆ. ಇಬ್ಬರು ಅಧಿಕಾರಿಗಳು ಹಾಗೂ ಒಬ್ಬ ಸಿಬಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News