ಚುನಾವಣೆ ಅಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ: ಪಿಟಿಐ

Update: 2024-02-13 17:24 GMT

Photo : AFP

ಇಸ್ಲಮಾಬಾದ್: ಪಿಪಿಪಿ ಮತ್ತು ಎಂಕ್ಯೂಎಂ-ಪಿ ಪಕ್ಷದ ಬೆಂಬಲ ಪಡೆದು ಸಮ್ಮಿಶ್ರ ಸರಕಾರ ರಚಿಸುವ ಸಾಧ್ಯತೆಯಿಲ್ಲ ಎಂದು ಪಿಟಿಐ ಸ್ಪಷ್ಟಪಡಿಸಿದೆ. ಅಡಿಯಾಲಾ ಜೈಲಿನಲ್ಲಿರುವ ಇಮ್ರಾನ್‍ಖಾನ್ ತಮ್ಮನ್ನು ಭೇಟಿಯಾದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ `ಪಿಪಿಪಿ ಮತ್ತು ಎಂಕ್ಯೂಎಂ-ಪಿ ಪಕ್ಷ ಅಕ್ರಮ ಹಣ ವರ್ಗಾವಣೆ ದಂಧೆಯಲ್ಲಿ ನಿರತರಾಗಿರುವವರ ಪಕ್ಷವಾಗಿದೆ' ಎಂದು ಆರೋಪಿಸಿದ್ದಾರೆ. `ಪಿಎಂಎಲ್-ಎನ್ ಪಕ್ಷ ತಾನೇ ಗೆದ್ದಿರುವುದಾಗಿ ಸುಳ್ಳು ಹೇಳುತ್ತಿದೆ. ನವಾಝ್ ಷರೀಫ್ ಮತ್ತು ಮರಿಯಂ ನವಾಝ್ ಇಬ್ಬರೂ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಮತ ಎಣಿಕೆಯಲ್ಲಿ ನಡೆದ ಅಕ್ರಮದಿಂದ ಇವರಿಬ್ಬರ ಗೆಲುವು ಸಾಧ್ಯವಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಹೋಗಲಿದ್ದೇವೆ' ಎಂದರು. ತಮ್ಮ ಪಕ್ಷದ ಅಭ್ಯರ್ಥಿ ಅಲಿ ಅಮೀನ್ ಗಂದಪುರ್ ಅವರು ಖೈಬರ್ ಪಖ್ತೂಂಕ್ವಾದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಇದೇ ಸಂದರ್ಭ ಇಮ್ರಾನ್ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News