ರಶ್ಯ ಪರ ಹೆಚ್ಚಿದ ಒಲವು | ಡಬ್ಲ್ಯೂಟಿಒ ಸಭೆಯಲ್ಲೂ ರಶ್ಯ ಪರ ನಿಂತ ಅಮೆರಿಕ
Update: 2025-02-26 21:43 IST

Photo Credit | NDTV
ಜಿನೆವಾ: ವಿಶ್ವಸಂಸ್ಥೆಯಲ್ಲಿ ರಶ್ಯ ಪರ ಮತ ಚಲಾಯಿಸಿದ ಮರುದಿನ ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ)ಯಲ್ಲಿ ಉಕ್ರೇನ್‍ನಲ್ಲಿ ರಶ್ಯದ ಆಕ್ರಮಣವನ್ನು ಖಂಡಿಸುವ ಜಂಟಿ ಹೇಳಿಕೆಯನ್ನು ಸಹಪ್ರಾಯೋಜಿಸಲು ಅಮೆರಿಕ ಬುಧವಾರ ನಿರಾಕರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
2022ರ ಫೆಬ್ರವರಿ ಬಳಿಕ ಪ್ರತೀ ವರ್ಷ ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ರಶ್ಯವನ್ನು ಖಂಡಿಸುವ ಡಬ್ಲ್ಯೂಟಿಒ ಹೇಳಿಕೆಯನ್ನು ಬೆಂಬಲಿಸುತ್ತಾ ಬಂದಿದ್ದ ಅಮೆರಿಕ, ಇದೇ ಮೊದಲ ಬಾರಿ ರಶ್ಯ ಪರ ನಿಲುವು ಪ್ರದರ್ಶಿಸಿದೆ. ಡಬ್ಲ್ಯೂಟಿಒದ 40 ಕ್ಕೂ ಅಧಿಕ ಸದಸ್ಯ ರಾಷ್ಟ್ರಗಳು ಹೇಳಿಕೆಯನ್ನು ಬೆಂಬಲಿಸಿವೆ.