ಮಾರಕ ಚುಚ್ಚುಮದ್ದು ನೀಡಿ ಮರಣದಂಡನೆ ಶಿಕ್ಷೆ ಜಾರಿ

Update: 2024-05-31 15:36 GMT

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಆಗ್ನೇಯ ಅಮೆರಿಕದ ಅಲಬಾಮಾ ರಾಜ್ಯದಲ್ಲಿ ವೃದ್ಧ ದಂಪತಿಯ ಹತ್ಯೆ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲಾದ ವ್ಯಕ್ತಿಗೆ ಮಾರಕ ಚುಚ್ಚುಮದ್ದು ನೀಡುವ ಮೂಲಕ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.

2004ರ ಜೂನ್ 24ರಂದು ಬರ್ಮಿಂಗ್ಹಾಮ್ ಬಳಿಯ ಗುಯಿನ್ ನಗರದಲ್ಲಿ 87 ವರ್ಷದ ಫ್ಲಾಯ್ಡ್ ಹಿಲ್ ಮತ್ತು ಅವರ ಪತ್ನಿ 72 ವರ್ಷದ ವೇರಾ ಹಿಲ್ ವಾಸವಿದ್ದ ಮನೆಗೆ ನುಗ್ಗಿದ್ದ ಜೇಮಿ ಮಿಲ್ಸ್ ಎಂಬಾತ ಸುತ್ತಿಗೆ, ಮಚ್ಚಿನಿಂದ ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಬಳಿಕ ಮನೆಯನ್ನು ದರೋಡೆಗೈದ ಬಗ್ಗೆ ಪ್ರಕರಣ ದಾಖಲಾಗಿತ್ತು. ಸುಧೀರ್ಘ ವಿಚಾರಣೆಯ ಬಳಿಕ ಮಿಲ್ಸ್ನನ್ನು ಮಾರಕ ಚುಚ್ಚುಮದ್ದು ನೀಡಿ ಹತ್ಯೆಗೈಯಲು ನ್ಯಾಯಾಲಯ ಆದೇಶಿಸಿತ್ತು. ಅಲಬಾಮಾ ಜೈಲಿನ ನಿಯಮದ ಪ್ರಕಾರ ಅಪರಾಧಿಗೆ ನೈಟ್ರೋಜನ್ ಗ್ಯಾಸ್ ನೀಡುವ ಅಥವಾ ವಿದ್ಯುತ್ ಕುರ್ಚಿಯಲ್ಲಿ ಮರಣದಂಡನೆ ಶಿಕ್ಷೆ ಅಥವಾ ಮಾರಕ ಇಂಜೆಕ್ಷನ್(ಓವರ್ಡೋಸ್ ಇಂಜೆಕ್ಷನ್) ನೀಡುವ ಶಿಕ್ಷೆಗಳಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶವಿದೆ.

ಕೊಲೆ ನಡೆಸಿದ ಎರಡು ದಶಕಗಳ ಬಳಿಕ ಜೇಮಿ ಮಿಲ್ಸ್ ತನ್ನ ಘೋರ ಅಪರಾಧಗಳಿಗೆ ಬೆಲೆ ಪಾವತಿಸಿದ್ದಾನೆ' ಎಂದು ಅಲಬಾಮಾದ ಗವರ್ನರ್ ಕೇಯ್ ಲೆವಿ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News