ಅಮೆರಿಕದ ಮೇರಿಲ್ಯಾಂಡ್‍ನಲ್ಲಿ ಅತೀ ಎತ್ತರದ ಅಂಬೇಡ್ಕರ್ ಪ್ರತಿಮೆ ಅ.14ರಂದು ಅನಾವರಣ

Update: 2023-10-03 16:36 GMT

ಡಾ. ಬಿ.ಆರ್. ಅಂಬೇಡ್ಕರ್ | Photo: ಸಾಂದರ್ಭಿಕ ಚಿತ್ರ \ NDTV 

 

ವಾಷಿಂಗ್ಟನ್ : ಅಮೆರಿಕದ ಮೇರಿಲ್ಯಾಂಡ್‍ನಲ್ಲಿ ಭಾರತದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅಕ್ಟೋಬರ್ 14ರಂದು ಅನಾವರಣಗೊಳ್ಳಲಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

`ಸಮಾನತೆಯ ಪ್ರತಿಮೆ' ಎಂದು ಹೆಸರಿಸಲಾದ ಈ ಪ್ರತಿಮೆ 10 ಅಡಿ ಎತ್ತರವಿದ್ದು ಭಾರತದ ಹೊರಗೆ ಅಂಬೇಡ್ಕರ್ ಅವರ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿದೆ. ಮೇರಿಲ್ಯಾಂಡ್‍ನ ಅಕೊಕೀಕ್ ನಗರದಲ್ಲಿ 13 ಎಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳಲಿರುವ `ಅಂಬೇಡ್ಕರ್ ಇಂಟರ್‍ನ್ಯಾಷನಲ್ ಸೆಂಟರ್(ಎಐಸಿ)'ಯ ಭಾಗವಾಗಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಗುಜರಾತ್‍ನ ನರ್ಮದಾ ನದಿಯ ತೀರದಲ್ಲಿ ವಲ್ಲಭಭಾಯಿ ಪಟೇಲ್ ಅವರ `ಏಕತಾ ಪ್ರತಿಮೆ' ನಿರ್ಮಿಸಿರುವ ಖ್ಯಾತ ಶಿಲ್ಪಿ ರಾಮ್ ಸುತರ್ ಅವರು ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News