ಜಪಾನ್ ಕರಾವಳಿಯಲ್ಲಿ ಅಮೆರಿಕ ಸೇನಾ ಹೆಲಿಕಾಪ್ಟರ್ ಪತನ : 8 ಮಂದಿ ಸಾವು

Update: 2023-11-30 17:37 GMT

Photo: Kyodo News

ಟೋಕಿಯೊ : ಜಪಾನ್ ಕರಾವಳಿಯಲ್ಲಿ ಅಮೆರಿಕ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಎಂಟು ಮಂದಿ ಯೋಧರು ಸಾವನ್ನಪ್ಪಿದ್ದಾರೆಂದು ಎಂದು ತಿಳಿದು ಬಂದಿದೆ.

ಗುರುವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ 2:47ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ಸಮುದ್ರದಲ್ಲಿ ಪತನಗೊಂಡಾಗ ಅದರ ಎಡಭಾಗದ ಎಂಜಿನ್ನಲ್ಲಿ ಬೆಂಕಿ ಚಿಮ್ಮುತ್ತಿದ್ದುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಮೆರಿಕ ಸೇನೆಯ ಒಸ್ಪ್ರೆ ಹೆಲಿಕಾಪ್ಟರ್, ದಕ್ಷಿಣ ಜಪಾನ್ನ ಯುಕುಶಿಮಾ ದ್ವೀಪದಲ್ಲಿ ಪತನಗೊಂಡಿದೆ. ಈ ಹೆಲಿಕಾಪ್ಟರ್ ಯುಕುಶಿಮಾ ವಿಮಾನನಿಲ್ದಾಣದಲ್ಲಿ ಇಳಿಯಲು ಧಾವಿಸುತ್ತಿದ್ದ ಅವಘಡ ಸಂಭವಿಸಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News