ಬಾಂಗ್ಲಾ : ವಾಟ್ಸ್ಯಾಪ್, ಯೂಟ್ಯೂಬ್, ಟಿಕ್‍ಟಾಕ್, ಇನ್‍ಸ್ಟಾಗ್ರಾಮ್ ನಿಷೇಧ

Update: 2024-08-03 16:02 GMT

ಢಾಕಾ : ಹಲವು ಸಾಮಾಜಿಕ ಮಾಧ್ಯಮ ಆ್ಯಪ್‍ಗಳು ಹಾಗೂ ಸಂವಹನ ವೇದಿಕೆಗಳ ಮೇಲೆ ಬಾಂಗ್ಲಾದೇಶ ಸರಕಾರ ರಾಷ್ಟ್ರವ್ಯಾಪಿ ನಿಷೇಧ ವಿಧಿಸಿರುವುದಾಗಿ ವರದಿಯಾಗಿದೆ.

ಜನಪ್ರಿಯ ಸಾಮಾಜಿಕ ಮಾಧ್ಯಮ ಆ್ಯಪ್‍ಗಳಾದ ಇನ್‍ಸ್ಟಾಗ್ರಾಮ್, ಟಿಕ್‍ಟಾಕ್, ಯೂ ಟ್ಯೂಬ್ ಮತ್ತು ವಾಟ್ಸ್ಯಾಪ್‍ಗಳನ್ನು ಬಳಸುವುದನ್ನು ಸರಕಾರ ನಿಷೇಧಿಸಿರುವುದಾಗಿ ವರದಿಯಾಗಿದೆ. ದೇಶದಾದ್ಯಂತ ಈ ಜನಪ್ರಿಯ ಆ್ಯಪ್‍ಗಳ ಬಳಕೆಯನ್ನು ನಿರ್ಬಂಧಿಸುವುದಾಗಿ ಸರಕಾರ ಶುಕ್ರವಾರ ಘೋಷಿಸಿದೆ. ಕಳೆದ ತಿಂಗಳು ಬಾಂಗ್ಲಾ ಸರಕಾರ ಫೇಸ್‍ಬುಕ್ ಬಳಕೆಯನ್ನು ನಿಷೇಧಿಸಿತ್ತು. ಇನ್‍ಸ್ಟಾಗ್ರಾಮ್ ಸಾಮಾಜಿಕ ಮಾಧ್ಯಮ ಆ್ಯಪ್‍ಗಳನ್ನು ಟರ್ಕಿಯೂ ನಿಷೇಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News