ಚುನಾವಣಾ ಆಕ್ರಮದ ವಿರುದ್ಧ ಪಿಟಿಐ ವ್ಯಾಪಕ ಪ್ರತಿಭಟನೆ
Update: 2024-02-17 16:35 GMT
ಇಸ್ಲಾಮಾಬಾದ್: ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕವಾಗಿ ಚುನಾವಣಾ ಆಕ್ರಮಗಳು ನಡೆದಿವೆಯೆಂದು ಆರೋಪಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ.
ಖೈಬರ್ ಪಖ್ತೂನ್ಖ್ವಾ ಪ್ರಾಂತದ ದಕ್ಷಿಣ ವಝೀರ್ಸ್ತಾನದಲ್ಲಿ ವಾನಾದಲ್ಲಿ ಪಾದಯಾತ್ರೆಯೊಂದಿಗೆ ಪ್ರತಿಭಟನಾ ರ‍್ಯಾಲಿ ಆರಂಭಗೊಂಡಿತು.
‘‘2024ರ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ವ್ಯಾಪಕಾಗಿ, ರಾಜಾರೋಷವಾಗಿ ವಂಚನೆಗಳು ನಡೆದಿವೆ. 180 ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳನ್ನು ಗೆದ್ದಿದ್ದರೂ, ಚುನಾವಣಾ ಅಕ್ರಮಗಳಿಂದಾಗಿ ಆ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲಾಯಿತು ’’ ಪಿಟಿಐ ವಕ್ತಾರ ರವೂಫ್ ಹಸನ್ ಹೇಳಿಕೆಯೊಂದರಲ್ಲ ತಿಳಿಸಿದ್ದಾರೆ.
ಚುನಾವಣಾ ಅಕ್ರಮದ ಗಾತ್ರದಿಂದಾಗಿ 2024ರ ಸಾರ್ವತ್ರಿಕ ಚುನಾವಣೆಯು ಪಾಕಿಸ್ತಾನದ ಇತಿಹಾಸದಲ್ಲೇ ಸ್ಮರಿಸಲ್ಪಡಲಿದೆ ಎಂದು ಅವರು ಹೇಳಿದ್ದಾರೆ.