ಕಲಬುರಗಿ | ಸಂಭ್ರಮದಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ
ಕಲಬುರಗಿ : ನಗರದಲ್ಲಿ ಬುಧವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಭೀಮಾ ಕೊರೆಗಾಂವ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಮುಂದೆ ಭೀಮ್ ಆರ್ಮಿ (ಭಾರತ್ ಏಕತಾ ಮಿಷನ್) ಪುನ ಜಿಲ್ಲಾ ಸಂಘಟನೆಯ ವತಿಯಿಂದ 207ನೇ ಭೀಮಾ ಕೊರೆವಾಂವ್ ವಿಜಯೋತ್ಸವ ಪ್ರಯುಕ್ತ ಬೃಹತ್ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಹಾಂತಪ್ಪ ಸಂಗಾವಿ ಅವರು ಕೇಕ್ ಕತ್ತರಿಸುವ ಮೂಲಕ ವಿಜಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ರಾಜ್ಯಾಧ್ಯಕ್ಷ ಎಸ್.ಎಸ್. ತವಡೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ದಿಗಂಬರ್ ಬೆಳಮಗಿ, ದೇವಿಂದ್ರ ಸಿನ್ನೂರ್, ದಿನೇಶ್ ದೊಡ್ಡಮನಿ, ವಾಸು ವಂಟಿ, ಮಲ್ಲಿಕಾರ್ಜುನ್ ನೀಲೂರ್, ಬಸವರಾಜ್ ಕುಮಸಿ, ಎಸ್.ಎಲ್ ಸಿಂಧೆ, ಅನುಪಮಾ ಅವರೂ ಸೇರಿದಂತೆ ಅನೇಕರು ಭಾಗವಹಿಸಿದರು. ಎಲ್ಲ ತಾಲ್ಲೂಕಿನ ಅಧ್ಯಕ್ಷರು ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುನೀಲ್ ಇಟಗಿ ಅವರು ತಿಳಿಸಿದ್ದಾರೆ.
ಯೂತ್ ಫೆಡರೇಷನ್ ಆಚರಣೆ :
ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಜಗತ್)ದಲ್ಲಿ ರಿಪಬ್ಲಿಕನ್ ಯೂತ್ ಫೆಡರೇಷನ್ ವತಿಯಿಂದ ಭೀಮಾ ಕೋರೆಗಾಂವ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ಹನುಮಂತ್ ಇಟಗಿ, ಮುಖಂಡರಾದ ದಿಗಂಬರ್ ಬೆಳಮಗಿ, ದೇವೆಂದ್ರ ಸಿನ್ನೂರ್, ಸಹ ಸಂಚಾಲಕರುಗಳಾದ ಅರುಣ್ ಸಾಗರ್ ಸಿದ್ಧಾರ್ಥ ಮದಾನಿ, ಸತೀಶ್ ಮಾಲೆ, ದಿನೇಶ್ ದೊಡ್ಡಮನಿ, ಮಲ್ಲಿಕಾರ್ಜುನ್ ಹೊಸಮನಿ, ರತನ್ ಕನ್ನಡಗಿ, ಜೈಭೀಮ್ ಕಾಂಬಳೆ, ರಾಣು ಹುಸೇನಿ ಪಾಳಾ, ದಯಾನಂದ್ ಕೊಹಿನೂರ್, ಮಂಜು ಸಿಕೆ, ದಶರಥ್ ತಳಕೇರಿ, ಶಿವಾನಂದ್ ಬುಕ್ಕನ್, ಜೈಭೀಮ್ ಕೊರವಾರ್, ಶಶಿ ಆಲೂರಕರ್, ಮಹೇಶ್ ನವಲಗಿರಿ, ಸಿದ್ಧು ಬೆಲಸೂರ್, ಅಜಿತ್ ಕುಮಸಿ, ಸಂತೋಷ್ ಅಷ್ಟಗಿ, ಬಾಲು ಖರ್ಗೆ, ವಿನೋದ್ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.
ಸಮತಾ ಸೈನಿಕ ದಳ :
ನಗರದ ಜಗತ್ ವೃತ್ತದ ಡಾ.ಅಂಬೇಡ್ಕರ್ ಪ್ರತಿಮೆಯ ಮುಂದೆ ಕರ್ನಾಟಕ ಸಮತಾ ಸೈನಿಕದಳ ಜಿಲ್ಲಾ ಸಮಿತಿ, ಜಿಲ್ಲಾ ಮಹಿಳಾ ಘಟಕ ಹಾಗೂ ಜಿಲ್ಲಾ ಕಾರ್ಮಿಕ ಘಟಕ ಸಂಯುಕ್ತ ಆಶ್ರಯದಲ್ಲಿ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷ ಹಾಗೂ ನ್ಯಾಯವಾದಿ ಸಂಜೀವ್ ಟಿ. ಮಾಲೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ ಎಂ.ಎನ್.ಸುಗಂಧಿ ಹಾಗೂ ಹಿರಿಯ ವಕೀಲರಾದ ರೇವಣಸಿದ್ದಪ್ಪ ದಿನಸಿ ಅವರು ಭೀಮಾ ಕೋರೆಗಾವ್ ವಿಜಯೋತ್ಸವ ಕುರಿತು ಕೂಲಂಕುಶವಾಗಿ ಮಾತನಾಡಿದರು. ಮಿಲಿಂದ್ ಕಣಮಸ್ ಅವರು ಸಹ ವಿಷಯ ಕುರಿತು ಮಾತನಾಡಿದರು.
ಈ ವೇಳೆ ಹಿರಿಯರಾದ ಅಮೃತ್‍ರಾವ್ ನಾಯ್ಕೋಡಿ, ಮಹಿಳಾ ಜಿಲ್ಲಾಧ್ಯಕ್ಷೆ ಶಿವಲಿಂಗಮ್ಮ ಸಾವಳಗಿ, ಜ್ಯೋತಿ ಎಸ್. ದರ್ಗಿ, ಜಿಲ್ಲಾಧ್ಯಕ್ಷ ಈರಣ್ಣ ಜಾನೆ, ವಕೀಲರಾದ ಆರ್. ಎಸ್. ಜಾನೆ, ಮಾರುತಿ ಲೇಂಗಟಿ, ಮಲ್ಲಿಕಾರ್ಜುನ್ ಸಿಂಗೆ, ವಿಜಯಕುಮಾರ್ ಸಾವಳಗಿ, ವಿಠಲ್ ವಾಲಿಕಾರ್, ಅನಿಲ್ ಕುಮಾರ್ ದೇವರ ಮನೆ, ರಮೇಶ್ ಸರಡಗಿ, ಮತ್ತು ಸತೀಶ್ ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ್ ಭಾವಿಮನಿ ಅವರು ವಂದಿಸಿದರು. ಹೀರಾಪುರದಲ್ಲಿಯೂ ಸಹ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು. ಸಂತೋಷ್ ಮೇಲ್ಮನಿ ಮುಂತಾದವರು ಪಾಲ್ಗೊಂಡಿದ್ದರು.