ಕಲಬುರಗಿ | ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಾಣಿ ಬಲಿ ತಡೆಯುವಂತೆ ಆಗ್ರಹ
ಕಲಬುರಗಿ: ಚಿಂಚೋಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೇವ-ದೇವತೆಯರ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಣಿ ಬಲಿಗಳನ್ನು ಜಿಲ್ಲಾಡಳಿತ ಮಧ್ಯಪ್ರವೇಶಿಸಿ ತಡೆಯುವ ಕೆಲಸ ಮಾಡಬೇಕೆಂದು ರಾಷ್ಟ್ರೀಯ ಮೂಲನಿವಾಸಿ ನಿವೃತ್ತ ಯೋಧರ ಸಂಘಟನೆಯಿಂದ ಚಿಂಚೋಳಿ ತಹಶೀಲ್ದಾರ್ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಚಿಂಚೋಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಆಯಾ ಗ್ರಾಮದ ದೇವ-ದೇವತೆಯರ ಹೆಸರಿನ ಮೇಲೆ ಕಾರ್ಯ ಮಾಡುವುದರ ಮುಖಾಂತರ ಅಮಾಯಕ ಕುರಿ, ಕೋಳಿ ಮತ್ತು ಕೋಣಗಳನ್ನು ಬಲಿ ಕೊಡುತ್ತಿರುವ ಕಾರ್ಯಗಳು ಪ್ರಾರಂಭವಾಗಿವೆ. ಆದ್ದರಿಂದ ದಯಮಾಡಿ ತಾಲೂಕಾಡಳಿತ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಎಚ್ಚೆತ್ತುಕೊಂಡು ಬಲಿಯಾಗುತ್ತಿರುವ ಪ್ರಾಣಿಗಳನ್ನು ಕಾಪಾಡಬೇಕೆಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸದೆ ಪ್ರಾಣಿ ಬಲಿ ಮುಂದುವರೆದರೆ ಸಂಘಟನೆ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರೇವಣಸಿದ್ದಪ್ಪ ಸುಬೇದಾರ್, ಮಾರುತಿ ಗಂಜಗಿರಿ, ಮೋಹನ ಐನಾಪೂರ ಸೇರಿದಂತೆ ಹಲವಾರು ಇದ್ದರು.