ಕಲಬುರಗಿ | ಲೋಕಾಯುಕ್ತರ ಬಲೆಗೆ ಬಿದ್ದ ಸಿಡಿಪಿಒ ಕಚೇರಿಯ ಎಫ್‌ಡಿಎ ಸಿಬ್ಬಂದಿ
Update: 2025-01-02 17:02 GMT
ಕಲಬುರಗಿ : ಅಂಗನವಾಡಿ ಸಹಾಯಕಿ ಹುದ್ದೆಗೆ ನೇಮಕ ಮಾಡುವುದಾಗಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಿಡಿಪಿಒ ಕಚೇರಿಯ ಮಹಿಳಾ ಎಫ್.ಡಿ.ಎ ಸಿಬ್ಬಂದಿಯೋರ್ವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.
ಶಿಲ್ಪಾ ಎಂಬಾತರೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್.ಡಿ.ಎ ಸಿಬ್ಬಂದಿಯಾಗಿದ್ದಾರೆ. ಅಂಗನವಾಡಿ ಸಹಾಯಕಿ ಹುದ್ದೆ ಕೊಡಿಸುವುದಾಗಿ ಮಹಿಳೆಯೊಬ್ಬರ ಬಳಿ ಶಿಲ್ಪಾ ಅವರು 50,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈಗಾಗಲೇ 35,000 ರೂ. ಪಡೆದಿದ್ದ ಶಿಲ್ಪಾ ಅವರು ಬಾಕಿ 15,000 ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಅಧಿಕಾರಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.