ಕಲಬುರಗಿ | ಪತ್ರಕರ್ತರ ಸಮಾಜಮುಖಿ ಸೇವೆ ಅಮೂಲ್ಯವಾದದ್ದು: ಕುಲಸಚಿವ ಡಾ.ಎಸ್.ಜಿ.ಡೊಳ್ಳೆಗೌಡರ್

Update: 2025-01-02 14:19 GMT

ಕಲಬುರಗಿ : ಪತ್ರಕರ್ತರು ಹೆಚ್ಚು ಸಂಬಳ ಪಡೆಯದಿರಬಹುದು ಆದರೆ ಅವರ ಕೆಲಸ ಮತ್ತು ಸೇವೆ ಅಮೂಲ್ಯವಾದದ್ದು. ಪತ್ರಕರ್ತರೆಂದರೆ ಸಮಾಜದ ಜಾಗೃತಿ ಜನರು. ಇದು ನಮಗೆಲ್ಲ ಸಂತೋಷ ಮತ್ತು ಹೆಮ್ಮೆಯ ವಿಷಯವೆಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಜಿ.ಡೊಳ್ಳೆಗೌಡರ್ ಅಭಿಪ್ರಾಯ ಪಟ್ಟರು.

ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದಿಂದ ಗುರುವಾರ ವಿಭಾಗದ ಅನುಭವ ಮಂಟಪದಲ್ಲಿ ಆಯೋಜಿಸಲ್ಪಟ್ಟ ಮೂವರು ಹಿರಿಯ ಪತ್ರಕರ್ತರು ಹಾಗೂ ಪ್ರಶಸ್ತಿಗೆ ಭಾಜನರಾದ ಎಸ್.ಆರ್.ಮಣೂರ್, ರಾಮಕೃಷ್ಣ ಬಡಶೇಷಿ ಹಾಗೂ ಶಿವಲಿಂಗಪ್ಪ ದೊಡ್ಡಮನಿಯವರಿಗೆ ಸನ್ಮಾನ ಸಮಾರಂಭ ಮತ್ತು ಹೊಸ ವಿದ್ಯಾರ್ಥಿಗಳ ಸ್ವಾಗತ ಹಾಗೂ ಹಳೆಯ ವಿದ್ಯಾರ್ಥಿಗಳ ಸಭೆಯ ಸಮಾರಂಭವನ್ನು ಸಸಿಗೆ ನೀರೆರೆಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಉದಯೋನ್ಮುಖ ಪತ್ರಕರ್ತರು ಈ ಮೂವರು ಹಿರಿಯ ಪತ್ರಕರ್ತರಿಂದ ಕಲಿಯಬೇಕಾದದ್ದು ಸಾಗರದಂತಿದೆ. ಯಾವಾಗಲೂ ನೀವು ಬರೆಯುವ ಸುದ್ದಿಯು ಮಾನವೀಯತೆಯ ಪರಿಕಲ್ಪನೆಯಾಗಿರಬೇಕು. ಬರವಣಿಗೆಯ ಪ್ರೀತಿಯಲ್ಲಿ ಮುಳುಗಿ ಜನರ ಸಮಸ್ಯೆಗಳ ಕುರಿತಾದ ಸುದ್ದಿ ಬರೆಯಲು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಈ ಸಂದರ್ಭದಲ್ಲಿ ಟಿ.ಎಸ್.ಆರ್ ಪ್ರಶಸ್ತಿಗೆ ಭಾಜನರಾದ ಎಸ್.ಆರ್.ಮಣೂರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ರಾಮಕೃಷ್ಣ ಬಡಶೇಷಿ ಹಾಗೂ ಮೋರೆ ಹನುಮಂತರಾಯ ಪ್ರಶಸ್ತಿಗೆ ಭಾಜನರಾದ ಶಿವಲಿಂಗಪ್ಪ ದೊಡ್ಡಮನಿ ಅವರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪತ್ರಿಕೋದ್ಯಮ ವಿಭಾಗದ ಡೀನ್ ಟಿ.ವಿ.ಶಿವಾನಂದನ್ ಅಥಿತಿಗಳ ಪರಿಚಯ ಮಾಡಿ ಸ್ವಾಗತಿಸಿದರು.

ವಿದ್ಯಾರ್ಥಿಗಳಾದ ಯಶಸ್ವಿನಿ ನಿರೂಪಿಸಿದರೆ, ಈಶ್ವರ್ ಪೂಜಾರಿ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News