ಕಲಬುರಗಿ | ಕಾರ್ಮಿಕರು ಕಾರ್ಮಿಕ ಇಲಾಖೆಯ ಸೌಲಭ್ಯ ಪಡೆಯಿರಿ : ರವಿಕುಮಾರ

Update: 2024-12-04 12:33 GMT

ಕಲಬುರಗಿ : ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಲಬುರಗಿ ಕಾರ್ಮಿಕ ಇಲಾಖೆ ಹಿರಿಯ ಕಾರ್ಮಿಕ ನಿರೀಕ್ಷಕ ರವಿಕುಮಾರ ಬಲ್ಲೂರ ಹೇಳಿದ್ದಾರೆ.

ಆಳಂದ ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಮಿಕ ಇಲಾಖೆ ಮತ್ತು ನ್ಯಾಯಾಲಯದ ಆಶ್ರಯದಲ್ಲಿ ನಡೆದ ʼಕಾನೂನು ಅರಿವು ನೆರವು ಕಾರ್ಯಕ್ರಮʼದಲ್ಲಿ ಕಾರ್ಮಿಕ ಇಲಾಖೆಯ ಸೌಲಭ್ಯಗಳ ಆಟೋ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅರ್ಹ ಕಟ್ಟಡ ಕಾರ್ಮಿಕರು ಇಲಾಖೆಗೆ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಮಗಿರುವ ಸೌಲಭ್ಯಗಳಾದ ಮಕ್ಕಳಿಗೆ ಶಿಷ್ಯ ವೇತನ, ಮದುವೆ ಧನಸಹಾಯ, ವೈದ್ಯಕೀಯ ವೆಚ್ಚ, ಅಂತ್ಯಕ್ರಿಯೆ ವೆಚ್ಚ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಬತ್ಯೆ, 60 ವರ್ಷ ಪೂರೈಸಿದ ಕಾರ್ಮಿಕರಿಗೆ ವಯೋನಿವೃತ್ತಿ ಬಳಿಕ ಪಿಂಚಣಿ ಯೋಜನೆ ಸೇರಿ ಹಲವು ಸೌಲಭ್ಯಗಳಿದ್ದು ಕಚೇರಿಗೆ ನೇರವಾಗಿ ಸಂಪರ್ಕಿಸಿ ಇವುಗಳ ಲಾಭವನ್ನು ಪಡೆದು ಕುಟುಂಬದ ಅಭಿವೃದ್ಧಿಯನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಆಟೋ ಪ್ರಚಾರಕ್ಕೆ ಹಿರಿಯ ಶ್ರೇಣಿಯ ನ್ಯಾ.ಎಸ್.ಎಂ.ಅರುಟಗಿ ಅವರು ಚಾಲನೆ ನೀಡಿ ಮಾತನಾಡಿ, ದುಡಿಯುವ ವರ್ಗ ಸೌಲಭ್ಯಗಳಿಂದ ವಂಚಿತವಾಗದಂತೆ ಅಧಿಕಾರಿಗಳು ನೋಡಿಕೊಂಡು, ಅವರಿಗಿರುವ ಸೌಲಭ್ಯಗಳನ್ನು ತಲುಪಿಸಬೇಕು. ಕಾರ್ಮಿಕರು ಸಹ ತಮ್ಮ ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲಾಕರ ವಿ.ರಾಠೋಡ, ಕಾರ್ಮಿಕ ಇಲಾಖೆ ಡಿಒ ಲಕ್ಷ್ಮೀಕಾಂತ್ ರಂಜೇರಿ, ಬಾಲಕಾರ್ಮಿಕ ಸೋಸೈಟಿ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಸೇರಿ ಮತ್ತಿತರು ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News