ಡಾ.ಬಿ.ಆರ್ ಅಂಬೇಡ್ಕರ್ ಇಲ್ಲದ ಭಾರತ ಶೂನ್ಯ: ಡಾ.ಕರಿಗಳೇಶ್ವರ್ ಫರತಾಬಾದ್
ಕಲಬುರಗಿ: ಆಧುನಿಕ ಭಾರತದ ಪಿತಾಮಹ ಡಾ.ಬಿ.ಆರ್ ಅಂಬೇಡ್ಕರ್. ಅಂಬೇಡ್ಕರ್ ಅವರಿಲ್ಲದ ಈ ಭಾರತ ಶೂನ್ಯವಾದಂತೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮಹಾಗಾಂವ್ ಕ್ರಾಸ್ ಸಹ ಪ್ರಾಧ್ಯಾಪಕ ಡಾ.ಕರಿಗುಳೇಶ್ವರ ಫರತಾಬಾದ್ ಅಭಿಪ್ರಾಯಪಟ್ಟರು.
ಜೇವರ್ಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಭವ್ಯ ಭಾರತದ ಅಭಿವೃದ್ಧಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಬಹು ಮುಖ್ಯ, ಈ ದೇಶದ ಅಭಿವೃದ್ಧಿಗೆ ಡಾ.ಅಂಬೇಡ್ಕರ್ ರವರ ಸಂವಿಧಾನವೇ ಕಾರಣ. ಸ್ವಾಭಿಮಾನಕ್ಕಾಗಿ ನಡೆದ ಭೀಮ ಕೋರೆಗಾಂವ್ ಯುದ್ಧದ ಇತಿಹಾಸವನ್ನು ಈ ದೇಶಕ್ಕೆ ತಿಳಿಸಿದವರು. ಅಂಬೇಡ್ಕರ್ ರವರೊಬ್ಬರೇ ಮೊದಲು ಮತ್ತು ಕೊನೆ, ಅವರಿಲ್ಲದ ಈ ಭಾರತ ಶೂನ್ಯ ಎಂದರು.
ನಂತರ ಉಪನ್ಯಾಸಕ ನಿಜಲಿಂಗ ದೊಡ್ಮನಿ ಮಾತನಾಡಿ, ಈ ದೇಶದಲ್ಲಿ ಸ್ವಾಭಿಮಾನಿಕಾಗಿ ನಡೆದ ಭೀಮಾ ಕೋರೆಗಾಂವ್ ಯುದ್ಧದ ಇತಿಹಾಸವು, ಇತಿಹಾಸ ಪುಟಗಳಲ್ಲಿ ಸೇರಿಸುವುದರ ಜೊತೆಗೆ ಪಠ್ಯಪುಸ್ತಕಗಳಲ್ಲೂ ಸೇರಿಸಬೇಕು. ಯುವ ಪೀಳಿಗೆ ಭೀಮ ಕೋರೆಗಾವ್ ಯುದ್ಧದ ಇತಿಹಾಸವನ್ನು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಸಂಘಾನಂದ ಬಂತೇಜಿ ಕಲಬುರ್ಗಿ ಬುದ್ಧ ವಿಹಾರ, ಕಾಂಗ್ರೆಸ್ ಮುಖಂಡ ಶಿವಲಾಲ್ ಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ,ಶಿವರಾಜ್ ಪಾಟೀಲ್ ರದ್ದೇವಾಡಗಿ, ಶಾಂತಪ್ಪ ಕೂಡಲಗಿ, ಚಂದ್ರಶೇಖರ ಹರನಾಳ ಮುಖಂಡರಾದ ಸುಭಾಸ ಚನ್ನೂರ, ಪುಂಡಲಿಕ ಗಾಯಕವಾಡ, ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ರಾಯಪ್ಪ ಬಾರಿಗಿಡ, ಹರಿಶ್ಚಂದ್ರ ಕೊಡಚಿ, ಮಲ್ಲಿಕಾರ್ಜುನ ಹಬ್ಬಳ್ಳಿ, ಬಸವರಾಜ ಇಂಗಳಗಿ, ಶರಣಪ್ಪ ಹೊಸಮನಿ, ಗಂಗೂಬಾಯಿ ಜಟ್ಟಿಂಗರಾಯ ಮಂತ್ರವಾಡ, ಸಿದ್ರಾಮ ಕಟ್ಟಿ, ಪ್ರಭಾಕರ್ ಸಾಗರ್, ಶ್ರೀಹರಿ ಕರಕೀಹಳ್ಳಿ ಸಿದ್ದು ಕೆರೂರ್, ರವಿ ಕುಳಗೇರಿ, ದೊಡ್ಡೇಶ್ ಕೊಂಬಿ, ಮಲ್ಲಮ್ಮ ಕೊಬ್ಬಿನ, ಜಗದೇವಿ ಜಟ್ನಾಕರ್, ಯಶವಂತ್ ಬಡಿಗೇರ್, ಪರಶುರಾಮ್ ನಡೆಗಟ್ಟಿ, ಮಿಲಿಂದ್ ಸಾಗರ್, ಚನ್ನು ಕಾಚಾಪುರ್, ಮೌನೇಶ್ ಹಂಗರಗಿ, ದೇವೇಂದ್ರ ಬಡಿಗೇರ್, ವಿಶ್ವ ಆಲೂರು, ಜೈ ಭೀಮ್ ಸಿಂಗೇ, ಪ್ರದೀಪ್ ಭುಟ್ನಾಳ್, ನಾಗರಾಜ್ ಜಟ್ನಾಕರ್, ದರ್ಶನ್ ಜಟ್ನಾಕರ್, ನವೀನ್ ಕೊಂಬಿನ್, ದೇವು ಜಟ್ಣಾಕರ್, ಸಂತೋಷ್ ಬಡಿಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.