ಪಿಎಂ ಆವಾಸ್ ಯೋಜನೆಯ ಮನೆ ನಿರ್ಮಾಣದಲ್ಲಿ ಗೋಲ್ಮಾಲ್ ನಡೆದಿಲ್ಲ: ಅಬ್ದುಲ್ ರಹ್ಮಾನ್
ಕಲಬುರಗಿ: ಜೇವರ್ಗಿ ಪಟ್ಟಣದಲ್ಲಿ ಪಿಎಂ ಆವಾಸ್ ಯೋಜನೆಯಡಿ 2019-20 ರಲ್ಲಿ 400 ಮನೆಗಳು, 2021-22 ರಲ್ಲಿ 750 ಮನೆಗಳು ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕೆಲ ಆರ್ ಟಿ ಐ ಕಾರ್ಯಕರ್ತರು ಸುಳ್ಳು. ಆರೋಪ ಮಾಡಿ ಕಾಮಗಾರಿ ನಡದೇ ಇಲ್ಲ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಪಿ ಡಬ್ಲ್ಯೂ ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೇವರ್ಗಿ ತಾಲೂಕಿನಲ್ಲಿ ಒಂದೇ ಒಂದು ಮನೆ ಕಟ್ಟದೇ 75 ಕೋಟಿಗೂ ಅಧಿಕ ಹಣ ಲೂಟಿ ಹೊಡೆಯಲಾಗಿದೆಯೆಂದು ಕೇವಲ ಆರೋಪಿಸಿದ್ದಾರೆ. ಇದು ಶಾಸಕ ಹೆಸರಿಗೆ ಮಸಿ ಬಳಿಯುವ ಕುತಂತ್ರವಾಗಿದೆ. ಶಾಸಕ ಡಾ. ಅಜಯಸಿಂಗ್ ಅವರು ಮುತುವರ್ಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಬಡ ಕುಟುಂಬಗಳಿಗೆ ನೆರವಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಲ್ಲಿಕಾರ್ಜುನ ದಿನ್ನಿ, ಶಿವಕುಮಾರ ವಂದೇವಾಲ, ಭೀಮಾರಾಯ ಹಳ್ಳಿ, ಪರಶುರಾಮ ಆಳಂದ, ಕಾಂತಪ್ಪ ಚನ್ನೂರ್, ಪರಶುರಾಮ್ ನಾಟಿಕರ್, ಜಾಕೀರ ವಡಗೇರಿ ಸೇರಿ, ರಾಮು ಬಿಲ್ಲರ್ ಸೇರಿದಂತೆ ಇತರರು ಹಾಜರಿದ್ದರು.