ಕಲಬುರಗಿ: ಪ್ರಚೋದನಾಕಾರಿ ಹೇಳಿಕೆ; ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು
Update: 2024-11-11 14:12 IST

ಕಲಬುರಗಿ: ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮಶಾಳದ ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಅಫಝಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಕ್ಫ್ ನೋಟಿಸ್ ಜಾರಿ ಹಿನ್ನಲೆ ರಾಜ್ಯಾದ್ಯಂತ 'ವಕ್ಫ್ ಹಠಾವೋ ದೇಶ ಬಚಾವೋ' ಎಂಬ ಪ್ರಮೇಯದಲ್ಲಿ ಅಫಝಲಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಮರುಳಾರಾಧ್ಯ ಸ್ವಾಮೀಜಿ, ಎಲ್ಲರ ಯುವಕರ ಮನೆಯಲ್ಲಿ ತಲ್ವಾರ್ ಇವೆ ಎನ್ನುತ್ತಿದ್ದಾರೆ, ಯಾರು ಬರುತ್ತಾರೆ ಅವರನ್ನು ಕಡಿಯುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾಗಿ ಇನ್ಮುಂದೆ 'ಮಕ್ಕಳ ಕೈಯಲ್ಲಿ ಪೆನ್ ಕೊಡುವ ಬದಲು ತಲ್ವಾರ್' ಕೊಡಬೇಕಾಗುತ್ತದೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು.
ಅಲ್ಲದೆ, 'ಜೀವ ಕೊಡುವುದಕ್ಕೂ, ಜೀವ ತೆಗೆಯುವುದಕ್ಕೂ ಸಿದ್ಧರಿದ್ದೇವೆ' ಎಂದು ಹೇಳಿದ್ದರು.
ಸ್ವಾಮೀಜಿ ಹೇಳಿಕೆ ನೀಡಿರುವ ಆಧಾರದ ಮೇಲೆ ಅಫಝಲಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಾಗಿದೆ.