ಜೇವರ್ಗಿಯಲ್ಲಿ ಅಸ್ಪೃಶ್ಯತೆ ಕುರಿತು ಬೀದಿ ನಾಟಕ ಪ್ರದರ್ಶನ

ಕಲಬುರಗಿ : ಜೇವರ್ಗಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಆವರಣದಲ್ಲಿ ನಿಸರ್ಗಾ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಸ್ಪೃಶ್ಯತೆ ನಿವಾರಣೆ ಕುರಿತು ಸಮಾನತೆ ಸಾರುವ ಬೀದಿ ನಾಟಕ ಮತ್ತು ವಿಚಾರ ಸಂಕೀರ್ಣ ಜರುಗಿತು.
ಜೇವರ್ಗಿ ಪೊಲೀಸ್ ಠಾಣೆಯ ಸಿಪಿಐ ರಾಜಾಸಾಹೇಬ ಅವರು ಮಾತನಾಡಿ, ಅಸ್ಪೃಶ್ಯತೆ ವಿರುದ್ಧ ಜಾಗೃತಿ ಮೂಡಿಸಲು ಲೋಹಿಯಾ ಕಲಾ ತಂಡವು ಬೀದಿ ನಾಟಕವು ಒಂದು ಶಕ್ತಿಯುತ ಮಾಧ್ಯಮವಾಗಿದೆ ಇದು ಸಾಮಾನ್ಯ ಜನರ ನಡುವಿನಲ್ಲಿ ಆಳವಾದ ಸಂದೇಶ ತಲುಪಿಸಲು ಸರಳ ಮಾಧ್ಯಮವಾಗಿದೆ ಎಂದು ಹೇಳಿದರು.
ವಕೀಲರಾದ ರಾಜು ಮುದ್ದಡಗಿ ಮಾತನಾಡಿ, ಸಮಾನತೆಯಿಂದ ನಾವು ಅಸ್ಪೃಶ್ಯತೆ ತೆಗೆದು ಹಾಕುವ ವಿಚಾರದಿಂದ ಗ್ರಾಮೀಣ ಪರಿಸರ ಮತ್ತು ನಗರ ಪರಿಸರ ಅಸ್ಪೃಶ್ಯತೆ ನಡುವಿನ ಸಂಬಂಧವನ್ನು ನಾವು ಒಂದು ಕುಟುಂಬ, ವ್ಯಕ್ತಿಯ ಭವಿಷ್ಯದ ಸಮಾನತೆಯ ಜಯವನ್ನು ಸಮಾನತೆಯ ಬೀದಿ ನಾಟಕದಿಂದ ತಿಳಿಸಲಾಯಿತು. ಅಸ್ಪೃಶ್ಯತೆ ಯಿಂದ ಬಳಲುತ್ತಿರುವ ವ್ಯಕ್ತಿತ್ವನ್ನು ಪ್ರೀತಿಸುವ ಜನ ಬದಲಾವಣೆ ತರಲು ಪ್ರಯತ್ನಿಸುತ್ತಿರುವ ಪಾತ್ರಧಾರಿಗಳು ನಟಿಸುವ ಈ ನಾಟಕವು ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನತೆಯಿಂದ ಬಾಳಲು ಅನುವು ಮಾಡಿಕೊಡುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ನ್ಯಾಯವಾದಿ ಧೂಳಪ್ಪ ದ್ಯಾಮನಕರ ಮಾತನಾಡಿ, ಸಂಸ್ಥೆಯು ಸುಮಾರು ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಯೋಜನೆ ಮಾಡುವ ಮೂಲಕ ಸರ್ಕಾರದ ಯೋಜನೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸೌಲಭ್ಯಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ವೇದಿಕೆಯಲ್ಲಿ ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿ ಶಂಬುಲಿಂಗ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಜೆ.ಡಿ.ಶರಣಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ಗುರುಲಿಂಗಪ್ಪಗೌಡ, ದಲಿತ ಮುಖಂಡರಾದ ಪುಂಡಲಿಕ ಗಾಯಕವಾಡ, ರವಿ ಕೊಳಗೇರಿ, ಮಲ್ಲಣ್ಣ ಕೊಡಚಿ, ಅಬ್ದುಲ ಗಣಿ, ಯಶ್ವಂತ ಮಂದೇವಾಲ ಇತರರು ಇದ್ದರು. ಕಾರ್ಯಕ್ರಮ ಕೊನೆಯಲ್ಲಿ ಲೋಹಿಯಾ ಕಲತಂಡ ಬೀದಿ ನಾಟಕ ಪ್ರದರ್ಶಿಸಿ ಜನರಲ್ಲಿ ಅರಿವು ಮೂಡಿಸಿದರು.