ಪಕ್ಷ ಬಿಟ್ಟು ಹೋಗುವವರನ್ನು ಕಾಯಲು ಪೊಲೀಸರನ್ನು ಬಿಡಲು ಆಗುತ್ತಾ?: ಶೆಟ್ಟರ್ ವಿರುದ್ಧ ಸಚಿವ ಎಚ್.ಕೆ ಪಾಟೀಲ್ ಕಿಡಿ

Update: 2024-01-27 13:41 GMT

ಮೈಸೂರು: ಜಗದೀಶ್ ಶೆಟ್ಟರ್ ಆಗಲಿ ಬೇರೆ ಯಾರೇ ಆಗಲಿ ಪಕ್ಷ ಬಿಟ್ಟು ಹೋಗುತ್ತಾರೊ ಇಲ್ಲವೊ ಎಂಬುದನ್ನು ಕಾಯಲು ಪೊಲೀಸರನ್ನು, ಸಿಐಡಿ ಅವರನ್ನು ಹಿಂದೆ ಇಡಲು ಆಗುತ್ತದೆಯೇ? ಯಾರು ಹೋಗುತ್ತಾರೊ ಹೋಗಲಿ. ಯಾರನ್ನು ಕಾಯುವ ಮತ್ತು ಕಣ್ಗಾವಲಿಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಹೇಳಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿರುವ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಶನಿವಾರ ಕರ್ನಾಟಕದ ಪ್ರಾಗೈತಿಹಾಸಿಕ ಕಾಲದ ಅವಶೇಷಗಳ ಪ್ರದರ್ಶನವನ್ನು ವೀಕ್ಷಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.

ಯಾರೇ ವ್ಯಕ್ತಿ ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಬಂದ ಮೇಲೆ ಅದಕ್ಕೆ ತಕ್ಕಂತೆ ಇರಬೇಕು. ಅವರು ಪಕ್ಷ ಬಿಡುತ್ತಾರೊ ಇಲ್ಲವೊ ಎಂದು ಅವರ ಹಿಂದೆ ಪೊಲೀಸರು, ಸಿಐಡಿಯನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದ ಹಾಗೆ ಇಂದಿರಗಾಂಧಿ ಕಾಲದಲ್ಲಿ ಏನಾಯಿತು ಎಂಬುದು ನಿಮ್ಮ ಕಣ್ಣ ಮುಂದಿದೆ. ಈಗ ವಿಧಾನಸಭಾ ಚುನಾವಣೆಗೂ ಮುನ್ನ 17 ಜನ ಶಾಲು ಹಿಡಿದುಕೊಂಡು ಹೋದರು. ಏನಾಯಿತು? ಕಾಂಗ್ರೆಸ್ ಪಕ್ಷ 136 ಶಾಸಕರನ್ನು ಗೆಲ್ಲಿಸಿಕೊಳ್ಳಲಿಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷಗಳ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ನಮ್ಮ ಶಕ್ತಿ ಹೆಚ್ಚಾಗಿದೆ. ನಮ್ಮ ಶಕ್ತಿಯನ್ನು ಸಹಿಸಲಾಗದೆ ಹತಾಶರಾಗಿರುವ ಬಿಜೆಪಿಯವರು ಪಕ್ಷಾಂತರಕ್ಕೆ ಒತ್ತುಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ಯಾಮನೂರು ಶಿವಶಂಕರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಅವರು ಬೇರೆ ಬೇರೆ ಮಹತ್ವದ ಹುದ್ದೆಯಲ್ಲಿ ಇರುವವರು. ಅವರು ಸಂಸದ ಬಿ.ವೈ.ವಿಜಯೇಂದ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಹೇಳಿರಲು ಸಾಧ್ಯವಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News