ಏರ್ ಇಂಡಿಯಾ ಗೆ 10 ಲಕ್ಷ ರೂ. ದಂಡ

Update: 2023-11-22 17:18 GMT

Photo: PTI 

ಹೊಸದಿಲ್ಲಿ: ದಿಲ್ಲಿ, ಕೊಚ್ಚಿ ಹಾಗೂ ಬೆಂಗಳೂರು ವಿಮಾನನಿಲ್ದಾಣಗಳಲ್ಲಿ ವಿಮಾನಗಳ ಪರಿಶೀಲನೆಯನ್ನು ನಡೆಸಿರುವ ಭಾರತೀಯ ವಿಮಾನಯಾನ ಮಹಾನಿರ್ದೇಶನಾಲಯ (DGCA)ವು ಪ್ರಚಲಿತದಲ್ಲಿರುವ ನಾಗರಿಕ ವಾಯುಯಾನ ಅವಶ್ಯಕತೆ (CAR)ಯ ನಿಯಮಗಳನ್ನು ಅನುಸರಿಸದೆ ಇರುವುದಕ್ಕಾಗಿ ಏರ್ ಇಂಡಿಯಾ ಸಂಸ್ಥೆಗೆ 10 ಲಕ್ಷ ರೂ. ದಂಡವನ್ನು ವಿಧಿಸಿದೆಯೆಂದು ಅಧಿಕೃತ ಮೂಲಗಳು ಬುಧವಾರ ಬಹಿರಂಗಪಡಿಸಿವೆ.

ನವೆಂಬರ್ 3 ರಂದು ಈ ಬಗ್ಗೆ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಕೂಡಾ ಜಾರಿಗೊಳಿಸಲಾಗಿತ್ತು. ಏರ್ ಇಂಡಿಯಾ ವು ಸಿಎಎಆರ್ ನಿಯಮಗಳಿಗೆ ಬದ್ಧವಾಗಿ ನಡೆಯುತ್ತಿಲ್ಲವೆಂದು ಅದು ಶೋಕಾಸ್ ಗೆ ಶೋಕಾಸ್ ನೋಟಿಸ್ ಗೆ ನೀಡಲಾದ ಉತ್ತರದಿಂದ ದೃಢಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ವಿಮಾನಯಾನ ವಿಳಂಬದಿಂದ ಬಾಧಿತರಾದ ಪ್ರಯಾಣಿಕರಿಗೆ ಹೊಟೇಲ್ ವಾಸ್ತವ್ಯವನ್ನು ಒದಗಿಸದೆ ಇರುವುದು,ನೆಲದಲ್ಲಿ ಕಾರ್ಯಾಚರಿಸುತ್ತಿರುವ ಸಿಬ್ಬಂದಿಗೆ ತರಬೇತಿ ನೀಡದಿರುವುದು ಹಾಗೂ ಅಂತಾರಾಷ್ಟ್ರೀಯ ಬ್ಯುಸಿನೆಸ್ ಕ್ಲಾಸ್ ನ ಪ್ರಯಾಣಿಕರಿಗೆ ಸೇವಾಯೋಗ್ಯವಲ್ಲದ ಆಸನಗಳ ಪ್ರಯಾಣಿಸುವಂತೆ ಮಾಡಿದ್ದಕ್ಕಾಗಿ ಪರಿಹಾರ ನೀಡದಿರುವುದಕ್ಕಾಗಿ ಏರ್ ಇಂಡಿಯಾ ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು.

ಈ ಎಲ್ಲಾ ಲೋಪಗಳಿಗಾಗಿ ಏರ್ ಇಂಡಿಯಾ ವಿರುದ್ಧ 10 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News