ಪುಲ್ವಾಮಾ ಮಸೀದಿಯಲ್ಲಿ ಮುಸ್ಲಿಮರಿಗೆ 'ಜೈ ಶ್ರೀ ರಾಮ್' ಹೇಳುವಂತೆ ಸೇನಾಪಡೆ ಬಲವಂತಪಡಿಸಿದೆ: ಮೆಹಬೂಬಾ ಮುಫ್ತಿ ಆರೋಪ

50 ಆರ್‌ಆರ್‌ ನ ಸೇನಾ ಪಡೆಗಳು ಪುಲ್ವಾಮಾದ ಮಸೀದಿಯೊಂದಕ್ಕೆ ನುಗ್ಗಿ ಅಲ್ಲಿನ ಮುಸ್ಲಿಮರಲ್ಲಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಶನಿವಾರ ಆರೋಪಿಸಿದ್ದಾರೆ.

Update: 2023-06-25 07:46 GMT
Editor : Muad | Byline : ವಾರ್ತಾಭಾರತಿ

ಶ್ರೀನಗರ: 50 ಆರ್‌ಆರ್‌ ನ ಸೇನಾ ಪಡೆಗಳು ಪುಲ್ವಾಮಾದ ಮಸೀದಿಯೊಂದಕ್ಕೆ ನುಗ್ಗಿ ಅಲ್ಲಿನ ಮುಸ್ಲಿಮರಲ್ಲಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ ಶನಿವಾರ ಆರೋಪಿಸಿದ್ದಾರೆ.

ಈ ಕ್ರಮವನ್ನು "ಪ್ರಚೋದನೆಯ ಕ್ರಮ" ಎಂದು ಕರೆದ ಪಿಡಿಪಿ ನಾಯಕಿ, ಈ ವಿಷಯದ ಬಗ್ಗೆ ತನಿಖೆಯನ್ನು ಆರಂಭಿಸಲು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರನ್ನು ವಿನಂತಿಸಿದರು.

“50 ಆರ್ಆರ್ಗೆ ಸೇರಿದ ಸೇನಾ ಪಡೆಗಳು ಪುಲ್ವಾಮಾದಲ್ಲಿ ಮಸೀದಿಯೊಂದಕ್ಕೆ ನುಗ್ಗಿ ಒಳಗಿದ್ದ ಮುಸ್ಲಿಮರನ್ನು ‘ಜೈ ಶ್ರೀ ರಾಮ್’ ಎಂದು ಜಪಿಸುವಂತೆ ಒತ್ತಾಯಿಸಿದ ಬಗ್ಗೆ ಕೇಳಿ ಆಘಾತವಾಯಿತು. ಅಮಿತ್ ಶಾ ಇಲ್ಲಿರುವಾಗ, ಅದೂ ಕೂಡ ಯಾತ್ರೆಗೆ ಮೊದಲು ಇಂತಹ ನಡೆ ಕೇವಲ ಪ್ರಚೋದನಕಾರಿ ಕೃತ್ಯವಾಗಿದೆ. ತಕ್ಷಣವೇ ತನಿಖೆಯನ್ನು ಆರಂಭಿಸಲು ರಾಜೀವ್ ಘಾಯ್ ಅವರನ್ನು ವಿನಂತಿಸಿಕೊಳ್ಳುವೆ’’ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News