ಸಂರಕ್ಷಿತ ತಾಣಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ಕೈಬಿಟ್ಟ ಎಎಸ್ಐ

Update: 2024-03-26 02:23 GMT

Photo:shutterstock.com

ಹೊಸದಿಲ್ಲಿ: ದೇಶದ 18 ಸಂರಕ್ಷಿತ ತಾಣಗಳನ್ನು ಕೇಂದ್ರೀಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ ಕೈಬಿಡಲು ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ (ಎಎಸ್ಐ) ನಿರ್ಧರಿಸಿದೆ. ಈ ತಾಣಗಳು ಇನ್ನು ಮುಂದೆ ರಾಷ್ಟ್ರೀಯ ಮಹತ್ವದ ತಾಣಗಳ ಪಟ್ಟಿಯಲ್ಲಿ ಇರುವುದಿಲ್ಲ.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಕಳೆದ ವರ್ಷ ಸಂಸದೀಯ ಸಮಿತಿಗೆ ಸಲ್ಲಿಸಿದ್ದ ಒಟ್ಟು 24 "ಪತ್ತೆಯಾಗದ ಸ್ಮಾರಕಗಳ" ಪಟ್ಟಿಯಿಂದ ಈ 18 ತಾಣಗಳನ್ನು ಗುರುತಿಸಿ, ಪಟ್ಟಿಯಿಂದ ಕೈಬಿಡಲು ನಿರ್ಧರಿಸಲಾಗಿದೆ.

ಹರ್ಯಾಣದ ಮುಜೇಸ್ಸರ್ ಗ್ರಾಮದ ಎಓಎಸ್ ಮಿನಾರ್-13, ದೆಹಲಿಯ ಬಾರಾ ಕಂಭ ಸ್ಮಶಾನ, ಝಾನ್ಸಿಯ ರಂಗೂನ್ ನಲ್ಲಿರುವ ಗುನ್ನೆರ್ ಬುರ್ಕಿಲ್ ಸಮಾಧಿ, ಲಕ್ನೋ ಗೋಘಾಟ್ ನ ಸ್ಮಶಾನ, ಉತ್ತರ ಪ್ರದೇಶದ ವಾರಣಾಸಿಯ ತೆಲಿಯಾ ನಾಲಾ ಬೌದ್ಧ ಅವಶೇಷಗಳು ಈ ಮಾನ್ಯತೆ ಕಳೆದುಕೊಳ್ಳುವ ಸ್ಮಾರಕಗಳಲ್ಲಿ ಸೇರಿವೆ.

ಈ ಸ್ಮಾರಕಗಳನ್ನು ಪಟ್ಟಿಯಿಂದ ಕೈಬಿಟ್ಟ ಬಳಿಕ, ಕೇಂದ್ರೀಯ ಏಜೆನ್ಸಿ ಈ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆ ಹೊಂದಿರುವುದಿಲ್ಲ. ಜತೆಗೆ ಇದಕ್ಕೆ ಸಂಬಂಧಿಸಿದ ನಿರ್ಮಾಣ ಚಟುವಟಿಕೆಗಳನ್ನು ಅಥವಾ ಈ ಪ್ರದೇಶಗಳ ನಗರೀಕರಣಕ್ಕೆ ಎಎಸ್ಐ ಅಡ್ಡಬರುವುದಿಲ್ಲ.

ಪ್ರಸ್ತುತ ಎಎಸ್ಐ 3638 ಸ್ಮಾರಕಗಳನ್ನು ಪಟ್ಟಿಯಲ್ಲಿ ಹೊಂದಿದ್ದು, ಇದು ಮುಂದಿನ ವಾರ ಬಿಡುಗಡೆಯಾಗುವ ಹೊಸ ಪಟ್ಟಿಯಲ್ಲಿ 3675 ಆಗಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News