ಸಸ್ಯಾಹಾರದ ಬದಲಿಗೆ ಮಾಂಸಹಾರ ಖಾದ್ಯ ಡೆಲಿವರಿ: ಝೊಮ್ಯಾಟೊ, ಮ್ಯಾಕ್ಡೊನಾಲ್ಡ್ ಗೆ 1 ಲಕ್ಷ ರೂ.ದಂಡ

Update: 2023-10-13 17:00 GMT

ಸಾಂದರ್ಭಿಕ ಚಿತ್ರ 

ಮುಂಬೈ: ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದರೂ, ಮಾಂಸಾಹಾರವನ್ನು ಡೆಲಿವರಿ ಮಾಡಿದ್ದಕ್ಕಾಗಿ ಜೋಧಪುರದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯು ಆನ್ಲೈನ್ ಆಹಾರಪೂರೈಕೆ ಸಂಸ್ಥೆಗಳಾದ ಝೊಮ್ಯಾಟೊ ಹಾಗೂ ಮ್ಯಾಕ್ಡೊನಾಲ್ಡ್ ಫಾಸ್ಟ್ ಫುಡ್ ಕಂಪೆನಿಗೆ ಜಂಟಿಯಾಗಿ 1 ಲಕ್ಷ ರೂ. ದಂಡ ವಿಧಿಸಿದೆ.

ದಾವೆಯ ವೆಚ್ಚವಾಗಿ 5 ಸಾವಿರೂ.ವನ್ನು ಗ್ರಾಹಕನಿಗೆ ಪಾವತಿಸುವಂತೆ ವೇದಿಕೆ ಆದೇಶಿಸಿದೆ. ದಂಡದ ಮೊತ್ತ ಹಾಗೂ ದಾವೆಯ ವೆಚ್ಚ ಇವೆರಡನ್ನೂ ರೊಮ್ಯಾಟೊ ಹಾಗೂ ಮ್ಯಾಕ್ಡೊನಾಲ್ಡ್ಸ್ ಜೊತೆಯಾಗಿ ಪಾವತಿಸಬೇಕಾಗುತ್ತದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಅನ್ನು ಉಲ್ಲಂಘಿಸಿದ್ದಕ್ಕಾಗಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ(II) ಯು ಮ್ಯಾಕ್ಡೊನಾಲ್ಡ್ ಹಾಗೂ ಅದರ ರೆಸ್ಟೋರೆಂಟ್ ಪಾಲುದಾರಸಂಸ್ಥೆಯಾದ ಝೊಮ್ಯಾಟೊಗೆ ಜಂಟಿಯಾಗಿ 1 ಲಕ್ಷ ರೂ. ದಂಡ ಹಾಗೂ ಮೊಕದ್ದಮೆಯ ವೆಚ್ಚವಾಗಿ 5 ಸಾವಿರ ರೂ. ಪರಿಹಾರ ವಿಧಿಸಿದೆ.

ಜೋಧ್ ಪುರದ ಗ್ರಾಹಕರೊಬ್ಬರು ಮ್ಯಾಕ್ಡೊನಾಲ್ಡ್ ನ ಮಳಿಗೆಯಿಂದ ಸಸ್ಯಾಹಾರದ ಖಾದ್ಯವನ್ನು ಆರ್ಡರ್ ಮಾಡಿದ್ದರು. ಆದರೆ ಅದರ ಬದಲಿಗೆ ಝೊಮ್ಯಾಟೊ ಆತನಿಗೆ ಮಾಂಸಹಾರವನ್ನು ಡೆಲಿವರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಗ್ರಾಹಕರು ಬಳಕೆದಾರರ ವ್ಯಾಜ್ಯ ಇತ್ಯರ್ಥ ವೇದಿಕೆಯ ಮೆಟ್ಟಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News