ಮಮತಾ ಬ್ಯಾನರ್ಜಿ ತಲೆಗೆ ಗಂಭೀರ ಗಾಯ, ನಾಯಕಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

Update: 2024-03-14 20:34 IST
ಮಮತಾ ಬ್ಯಾನರ್ಜಿ ತಲೆಗೆ ಗಂಭೀರ ಗಾಯ, ನಾಯಕಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ
  • whatsapp icon

ಕೋಲ್ಕತಾ : ಅವಘಡವೊಂದರಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗಂಭೀರ ಗಾಯಗೊಂಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗುರುವಾರ ತಿಳಿಸಿದೆ.

ಅವರನ್ನು ಕೋಲ್ಕತ್ತಾದ ಎಸ್ಎಸ್ಕೆಎಂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅದು ಮಾಹಿತಿ ನೀಡಿದೆ.

ಮಮತಾ ಬ್ಯಾನರ್ಜಿ ಅವರು ದಕ್ಷಿಣ ಕೋಲ್ಕತ್ತಾದ ಕಾಳಿಘಾಟ್ನಲ್ಲಿರುವ ತನ್ನ ನಿವಾಸದಲ್ಲಿ ಜಾರಿ ಬಿದ್ದರು. ಇದರಿಂದ ಅವರ ಹಣೆಗೆ ಗಂಭೀರ ಗಾಯವಾಗಿದೆ. ಅವರು ದಕ್ಷಿಣ ಕೋಲ್ಕತ್ತಾದ ಬಾಲಿಗಂಜ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಹಿಂದಿರುಗಿದ ಸಂದರ್ಭ ಈ ಘಟನೆ ನಡೆದಿದೆ ಎಂದು ಅದು ಹೇಳಿದೆ.

ಮಮತಾ ಬ್ಯಾನರ್ಜಿ ಅವರು ಗಾಯಗೊಂಡಿರುವ ಸುದ್ದಿಯನ್ನು ಟಿಎಂಸಿ ‘ಎಕ್ಸ್’ನಲ್ಲಿ ಶೇರ್ ಮಾಡಿದೆ. ಅಲ್ಲದೆ, ಮಮತಾ ಬ್ಯಾನರ್ಜಿ ಅವರ ಹಣೆಯಿಂದ ರಕ್ತ ಸುರಿಯುವ ಫೋಟೊವನ್ನು ಅಪ್ಲೋಡ್ ಮಾಡಿದೆ.

‘‘ನಮ್ಮ ಅಧ್ಯಕ್ಷರಾದ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯವಾಗಿದೆ. ನೀವು ಅವರಿಗಾಗಿ ಪ್ರಾರ್ಥಿಸಿ’’ ಎಂದು ಪಕ್ಷ ‘ಎಕ್ಸ್’ನಲ್ಲಿ ಬರೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News