ಭಾರತೀಯ ಕುಸ್ತಿ ಆಖಾಡಕ್ಕೆ ಆಪ್ತನ ನೇಮಕದ ಬೆನ್ನಲ್ಲೇ ಸಂಭ್ರಮಿಸಿದ ʼಕಳಂಕಿತʼ ಬ್ರಿಜ್ ಭೂಷಣ್ ಸಿಂಗ್

Update: 2023-12-21 15:36 GMT

Photo : socialnews.xy

ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಶನ್‌ಗೆ ನಡೆದ ಚುನಾವಣೆಯಲ್ಲಿ ತಮ್ಮ ಆಪ್ತ ಸಹಾಯಕರು ಜಯಭೇರಿ ಬಾರಿಸಿದ ಕೆಲವೇ ದಿನಗಳಲ್ಲಿ, ಭಾರತದ ಕೆಲವು ಪ್ರಮುಖ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಸಂಸ್ಥೆಯ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು “ನಾನು ಮೇಲುಗೈ ಸಾಧಿಸಿದ್ದೇನೆ, ನಾನು ಮೇಲುಗೈ ಸಾಧಿಸುತ್ತೇನೆ” ಎಂದು ಸಂಭ್ರಮಿಸಿದರು. ಆ ಮೂಲಕ ಕುಸ್ತಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಲಿದೆ ಎಂದು ಪರೋಕ್ಷವವಾಗಿ ಎದುರಾಳಿಗಳನ್ನು ಕಟಕಿದರು.

ಗುರುವಾರ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ಸಹಾಯಕ ಸಂಜಯ್ ಸಿಂಗ್ 47 ಮತಗಳಲ್ಲಿ 40 ಮತಗಳನ್ನು ಪಡೆದು, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರನ್ನು ಸೋಲಿಸಿದರು. ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟಿಸಿದ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಕುಸ್ತಿಪಟುಗಳು ಶೆರಾನ್ ಅವರನ್ನು ಬೆಂಬಲಿಸಿದ್ದರು.

ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್, ಇದು ದೇಶದ ಕುಸ್ತಿಪಟುಗಳ ವಿಜಯವಾಗಿದೆ. ತಮ್ಮ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ "11 ತಿಂಗಳ ಕಾಲ ಸ್ಥಗಿತಗೊಂಡಿದ್ದ" ಕುಸ್ತಿ ಚಟುವಟಿಕೆಗಳು ಈಗ ಪುನರಾರಂಭಗೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

"ದೇಶದ ಪ್ರತೀ ಅಖಾಡ (ಕುಸ್ತಿ ಅಕಾಡೆಮಿ) ಈಗ ಪಟಾಕಿಗಳನ್ನು ಸಿಡಿಸುತ್ತಿದೆ. ಗೆಲುವಿನ ಶ್ರೇಯವನ್ನು ದೇಶದ ಕುಸ್ತಿಪಟುಗಳಿಗೆ ಮತ್ತು ಮತದಾರರಿಗೆ ನೀಡಲು ನಾನು ಬಯಸುತ್ತೇನೆ. ನಾನು ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಸುಪ್ರೀಂ ಕೋರ್ಟ್‌ನ ಸೂಚನೆಯ ಮೇರೆಗೆ ಚುನಾವಣೆಗಳನ್ನು ನಡೆಸಲಾಯಿತು... ಚುನಾವಣೆಗಳು ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ಮುಂದಾಯಿತು ಮತ್ತು ಪಕ್ಷೇತರ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ," ಬ್ರಿಜ್ ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News