ಪಶ್ಚಿಮಬಂಗಾಳದ ಪಂಚಾಯತ್ ಚುನಾವಣೆ: ಮತಪೆಟ್ಟಿಗೆಯೊಂದಿಗೆ ಓಡಿಹೋದ ಅಪರಿಚಿತ ವ್ಯಕ್ತಿ!

Update: 2023-07-08 11:41 GMT

Screengrab: Twitter/@Nirmalyo

ಕೂಚ್ ಬೆಹಾರ್: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಶನಿವಾರ ನಡೆಯುತ್ತಿದ್ದು, ಕೂಚ್ ಬಿಹಾರ್ ಜಿಲ್ಲೆಯಲ್ಲಿ ಮತದಾನದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮತಪೆಟ್ಟಿಗೆಯೊಂದಿಗೆ ಓಡಿ ಹೋಗಿರುವ ಘಟನೆ ನಡೆದಿದೆ.

ಈ ವ್ಯಕ್ತಿ ಬಿಜೆಪಿ ಪಕ್ಷಕ್ಕೆ ಸೇರಿದ್ದಾನೆ ಎಂದು ಟಿಎಂಸಿ ಆರೋಪಿಸಿದೆ, ಆದರೆ  ಯಾವ ಪಕ್ಷದವರು ಈ ಕೃತ್ಯ ಎಸಗಿದ್ದಾರೆಂದು ದೃಢಪಟ್ಟಿಲ್ಲ.

ಮತಪೆಟ್ಟಿಗೆಯೊಂದಿಗೆ ವ್ಯಕ್ತಿ ಓಡಿಹೋದ ಘಟನೆ ಚುನಾವಣೆಯ ಸಮಗ್ರತೆ ಹಾಗೂ ಚುನಾವಣಾ ಪ್ರಕ್ರಿಯೆಯ ಬಗ್ಗೆ ಕಳವಳ ಮೂಡಿಸಿದೆ.

ಕೂಚ್ ಬೆಹಾರ್  ಜಿಲ್ಲೆಯಲ್ಲಿ ಮತಪೆಟ್ಟಿಗೆಗಳಿಗೆ ಬೆಂಕಿ ಹಚ್ಚಿದ ವರದಿಗಳು ಬಂದಿವೆ. ಸುದ್ದಿ ಸಂಸ್ಥೆ ANI ಪ್ರಕಾರ, ಕೂಚ್ ನ ದಿನ್ಹಾಟಾದ ಬರನಾಚಿನಾದಲ್ಲಿನ ಮತಗಟ್ಟೆಯಲ್ಲಿ ಮತಪೆಟ್ಟಿಗೆ ಬೂತ್ ನಲ್ಲಿ ನಕಲಿ ಮತದಾನದಿಂದ ಕೋಪಗೊಂಡ ಮತದಾರರು  ಬೆಂಕಿ ಹಚ್ಚಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News