ಬಿಎಸ್‌ಎನ್‌ಎಲ್‌ಗೆ ಸರಕಾರ ಕಾಯಕಲ್ಪ ನೀಡಲಿ

Update: 2024-07-17 09:06 GMT

ಮಾನ್ಯರೇ,

ಸಾರ್ವಜನಿಕ ವಲಯದ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್‌ನ ಭವಿಷ್ಯದ ಸ್ಥಿತಿಗತಿಯ ಬಗ್ಗೆ ಸರಕಾರ ಚಿಂತನೆ ನಡೆಸಬೇಕಿದೆ. ಮಾರುಕಟ್ಟೆಯ ಸ್ಪರ್ಧೆ ಬಿಎಸ್‌ಎನ್‌ಎಲ್‌ಗೆ ದೊಡ್ಡ ಸಮಸ್ಯೆಯಾಗಿದ್ದು, ಈ ಬಗ್ಗೆ ಸರಕಾರ ಬಿಎಸ್‌ಎನ್‌ಎಲ್ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿ ತುರ್ತು ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.

ಪ್ರಸಕ್ತ ಬಿಎಸ್‌ಎನ್‌ಎಲ್ ಕಂಪೆನಿಯ ನಷ್ಟಕ್ಕೆ ಕಾರಣಗಳು ಹಲವಾರಿವೆ. ಕೇಂದ್ರ ಸರಕಾರ 5ಜಿ ತರಂಗಗಳ ಹರಾಜು ಪ್ರಕ್ರಿಯೆಯನ್ನು ಈಗಾಗಲೇ ಮಾಡಿ ಮುಗಿಸಿದ್ದರೂ, ಬಿಎಸ್‌ಎನ್‌ಎಲ್ ಇನ್ನೂ 4ಜಿಯನ್ನೇ ಹೊಂದಿಲ್ಲ! ಇದರಿಂದ ಬಿಎಸ್‌ಎನ್‌ಎಲ್ ಚಂದಾದಾರರ ಸಂಖ್ಯೆಯ ಬೆಳವಣಿಗೆ ತೀವ್ರ ಮಂದಗತಿಯಲ್ಲಿದೆ. ನಗರ ಹಾಗೂ ತುಂಬಾ ಕುಗ್ರಾಮ ಅನಿಸುವಂತಹ ಗ್ರಾಮೀಣ ಪ್ರದೇಶಗಳಲ್ಲೂ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಜಾಲ ತುಂಬಾ ಸಮರ್ಥವಾಗಿದ್ದು, ಈಗಲೂ ಕೇಂದ್ರ ಹಾಗೂ ರಾಜ್ಯ ಸರಕಾರದ ಅಧಿಕಾರಿ ಹಾಗೂ ನೌಕರವರ್ಗ ಸೇರಿದಂತೆ ಲಕ್ಷಾಂತರ ಚಂದಾದಾರರು ಬಿಎಸ್‌ಎನ್‌ಎಲ್‌ನ್ನು ಆಶ್ರಯಿಸಿದ್ದಾರೆ. ಹೀಗೆ ಬಿಎಸ್‌ಎನ್‌ಎಲ್ ಹೆಚ್ಚು ಜನಸ್ನೇಹಿಯಾಗಿದ್ದರೂ ಮಾರುಕಟ್ಟೆಯ ತೀವ್ರ ಸ್ಪರ್ಧೆ ಹಾಗೂ ಅದರ ದಕ್ಷ ನಿರ್ವಹಣೆಯ ಕೊರತೆಯಿಂದ ನಷ್ಟದತ್ತ ಸಾಗಿದೆ. ಕೇಂದ್ರಸರಕಾರದಿಂದ ತುರ್ತು ನೆರವು ಇಲ್ಲದೆ ಬಿಎಸ್‌ಎನ್‌ಎಲ್ ನಿರ್ವಹಿಸುವುದು ಕಷ್ಟಸಾಧ್ಯವಾಗಿರುವ ಈ ಸಂದರ್ಭದಲ್ಲಿ ಕೇಂದ್ರಸರಕಾರ ಯಾವುದೇ ಕಾರಣಕ್ಕೂ ಬಿಎಸ್‌ಎನ್‌ಎಲ್‌ನ್ನು ಮುಚ್ಚಲು ಬಿಡದೆ ಬದಲಾಗಿ ಬಿಎಸ್‌ಎನ್‌ಎಲ್‌ಗೆ ಕಾಯಕಲ್ಪ ನೀಡಿ, ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನು ದೇಶದಾದ್ಯಂತ ತುರ್ತಾಗಿ ಆರಂಭಿಸುವುದು ಅಗತ್ಯ ಹಾಗೂ ಅವಶ್ಯಕವಾಗಿದೆ.

ಹರಳಹಳ್ಳಿಪುಟ್ಟರಾಜು,

ಪಾಂಡವಪುರ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News