ಕೇರಳ ರಾಜ್ಯದ ಎಐಸಿಸಿ ಕಾರ್ಯದರ್ಶಿಯಾಗಿ ಪಿ.ವಿ ಮೋಹನ್ ನೇಮಕ

Update: 2024-03-29 14:20 IST
ಕೇರಳ ರಾಜ್ಯದ ಎಐಸಿಸಿ ಕಾರ್ಯದರ್ಶಿಯಾಗಿ ಪಿ.ವಿ ಮೋಹನ್ ನೇಮಕ
  • whatsapp icon

ಹೊಸದಿಲ್ಲಿ: ಕೇರಳ ರಾಜ್ಯದ ಎಐಸಿಸಿಯ ಕಾರ್ಯದರ್ಶಿಯಾಗಿ ಪಿ. ವಿ. ಮೋಹನ್ ಅವರು ನೇಮಕಗೊಂಡಿದ್ದಾರೆ.

ತೆಲಂಗಾಣ ರಾಜ್ಯದ ಚುನಾವಣೆಯ ಉಸ್ತುವಾರಿಯಲ್ಲಿ ಓರ್ವರಾಗಿ ಕಾರ್ಯ ನಿರ್ವಹಿಸಿದ್ದ ಕೆಪಿಸಿಸಿ  ಉಪಾಧ್ಯಕ್ಷ‌ ಪಿ. ವಿ. ಮೋಹನ್ ಅವರನ್ನು ಕೇರಳ ರಾಜ್ಯದ ಎಐಸಿಸಿಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದೇಶ ಹೊರಡಿಸಿದ್ದಾರೆ.

ಪ್ರಕಟನೆಯೊಂದರಲ್ಲಿ ಎಐ ಸಿಸಿ ಯ ಪ್ರಧಾನ ಕಾರ್ಯದರ್ಶಿ  ಕೆ. ಸಿ. ವೇಣುಗೋಪಾಲ್ ಅವರು ಇದನ್ನು ತಿಳಿಸಿದ್ದಾರೆ.

ಪ್ರಸ್ತುತ ಪಿವಿ. ಮೋಹನ್ ಅವರು ಕೆಪಿಸಿಸಿಯ ಬಿ ಎಲ್ ಎ ಸಂಯೋಜನಾ ಮತ್ತು ತರಬೇತಿ ಸಮಿತಿಯ ರಾಜ್ಯಾಧ್ಯಕ್ಷರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News