ಬಿಸಿಯೂಟ ನೌಕರರಿಗೆ 1,000 ರೂ. ಹೆಚ್ಚಳ; ಲಿಂಗಸುಗೂರಿನಲ್ಲಿ ಸಂಭ್ರಮಾಚರಣೆ

Update: 2025-03-09 17:21 IST
ಬಿಸಿಯೂಟ ನೌಕರರಿಗೆ 1,000 ರೂ. ಹೆಚ್ಚಳ; ಲಿಂಗಸುಗೂರಿನಲ್ಲಿ ಸಂಭ್ರಮಾಚರಣೆ
  • whatsapp icon

ರಾಯಚೂರು : ರಾಜ್ಯ ಸರಕಾರ ಬಜೆಟ್ ನಲ್ಲಿ ಬಿಸಿಯೂಟ ನೌಕರರಿಗೆ 1,000‌ ರೂ. ಗೌರವಧನ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಲಿಂಗಸುಗೂರು ತಾಲೂಕು ಘಟಕದ ವತಿಯಿಂದ ಲಿಂಗಸುಗೂರಿನ ಗುರುಭವನದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಕಳೆದ ಮಾ.4 ಮತ್ತು 5ರಂದು ರಾಜ್ಯದ್ಯಾಂತ ಶಾಲೆಗಳಲ್ಲಿ ಬಿಸಿಯೂಟ ಅಡುಗೆ ಬಂದ್ ಮಾಡಿ ಬೆಂಗಳೂರಿನಲ್ಲಿ ಆಹೋ ರಾತ್ರಿ ಧರಣಿ ನಡೆಸಿ‌ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ್ದರು. ಹೋರಾಟಕ್ಕೆ ಸ್ಪಂದಿಸಿ 1ಸಾವಿರ ಹೆಚ್ಚಳ ಮಾಡಿದಿದ್ದರಿಂದ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಬಿಸಿಯೂಟ ನೌಕರರು ಸಭೆ ಸೇರಿ ಬಳಿಕ ಸಂಭ್ರಮಾಚರಣೆಯ ಮಾಡಿದರು.

ಬಿಸಿಯೂಟ ನೌಕರರ ಸಂಘಟನೆಯ ನಿರಂತರ ಹೋರಾಟಕ್ಕೆ ದೂಡ್ಡ ಗೆಲುವು ಸಿಕ್ಕಿದೆ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಮುಹಮ್ಮದ್ ಹನೀಫ್, ತಾಲ್ಲೂಕು ಅಧ್ಯಕ್ಷೆ ಸಿದ್ದಮ್ಮ, ತಾಲ್ಲೂಕು ಖಜಾಂಚಿ ಶೈನಾಜ ಬೇಗಂ, ಪದಾಧಿಕಾರಿಗಳಾದ ಹನುಮಂತಿ ಆನ್ವರಿ, ರೇಣುಕಾ ನಿಲಾಗಲ್ಲ, ಸರೋಜ ಕಡಕಲ್ಲ, ಸುಮಂಗಲ್ಲ ಲಿಂಗಸ್ಗೂರು, ನೀಲಮ್ಮ ರಾಂಪೂರ, ಮಹಾಲಕ್ಷ್ಮಿ, ಗುಂಡಸಾಗರ, ಸುಭದ್ರಮ್ಮ ಐದಭಾವಿ, ಶರಣಮ್ಮಹಿರೆಹುಪ್ಪೇರಿ, ಹನುಮವ್ವ ರಾಯದುರ್ಗ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಶಾಖೆಯ ಪ.ಕಾರ್ಯದರ್ಶಿ ವೆಂಕಟೇಶ್ ಗೂರ್ಕಲ್, ಹಾಜಿ ಮೌಲ, ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News