ವಿಶ್ವಕಪ್‌ ಕ್ರಿಕೆಟ್‌ : ನೂರರ ಗಡಿ ದಾಟಿದ ನೆದರ್‌ ಲ್ಯಾಂಡ್ಸ್‌

Update: 2023-10-10 07:23 GMT

PHOTO : cricketworldcup.com

ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 6 ನೇ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ನೀಡಿದ 323 ರನ್ ಗಳ ಗುರಿ ಬೆನ್ನು ಹತ್ತಿದ ನೆದರ್ ಲ್ಯಾಂಡ್ಸ್  ನೂರರ ಗಡಿ ದಾಟಿದೆ. 

 ನೆದರ್ ಲ್ಯಾಂಡ್ಸ್ ನ ವಿಕ್ರಮಜಿತ್ ಸಿಂಗ್ 12 ರನ್ ಮಾಟ್ ಹೆನ್ರಿ ಗೆ ವಿಕೆಟ್ ಒಪ್ಪಿಸಿದರೆ, ಮಾಕ್ಸ್ ಒ,ಡೌಟ್ 16 ರನ್ ಗೆ ಮಿಚೆಲ್ ಸಾಂಟ್ನರ್ ಗೆ ವಿಕೆಟ್ ನೀಡಿ ಇನ್ನಿಂಗ್ಸ್ ಮುಗಿಸಿದರು. ಬಾಸ್ ಡೆ ಲೀಡೆ 18 ರನ್ ಗಳಿಸಿ ಪವಿಲಿಯನ್ ಹಾದಿ ತುಳಿದರು. ಸದ್ಯ ಕಾಲಿನ್ ಆಕೆರ್ಮಾನ್ 35, ತೇಜಾ ನಿದಮಮನ್ರು 18 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ನೆದರ್ ಲ್ಯಾಂಡ್ಸ್‌ 23 ಓವರ್ ಗಳಲ್ಲಿ 102 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News