ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಬೀಚ್ ನಲ್ಲಿ ಕಾಲ ಕಳೆದ ರೋಹಿತ್ ಶರ್ಮಾ

Update: 2024-07-01 16:47 GMT

ರೋಹಿತ್ ಶರ್ಮಾ | PC : X

ಬಾರ್ಬಡೋಸ್ : ಟಿ20 ವಿಶ್ವಕಪ್ ಜಯಿಸಿದ ಮರುದಿನ ನಾಯಕ ರೋಹಿತ್ ಶರ್ಮಾ ವಿನ್ನರ್ಸ್ ಟ್ರೋಫಿಯೊಂದಿಗೆ ಅಧಿಕೃತ ಫೋಟೊಶೂಟ್‌ ನಲ್ಲಿ ಭಾಗವಹಿಸಲು ಬಾರ್ಬಡೋಸ್ನ ಬೀಚ್ನಲ್ಲಿ ಕೆಲವು ಸಮಯ ಕಳೆದಿದ್ದಾರೆ.

ಜೂನ್ 29ರಂದು ಕೆನ್ಸಿಂಗ್ಟನ್ ಓವಲ್‌ ನಲ್ಲಿ ನಡೆದ ರೋಚಕ ಫೈನಲ್‌ ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ ಅಂತರದಿಂದ ಸೋಲಿಸಿತು. ಆ ಮೂಲಕ 17 ವರ್ಷಗಳ ನಂತರ ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಬಾರಿ ಪ್ರಶಸ್ತಿ ಜಯಿಸಿತು. ಎಂ.ಎಸ್. ಧೋನಿ ನಾಯಕತ್ವದಲ್ಲಿ 2007ರಲ್ಲಿ ಭಾರತವು ಮೊದಲ ಆವೃತ್ತಿಯ ಟಿ20 ವಿಶ್ವಕಪ್ನ್ನು ಜಯಿಸಿತ್ತು.

ಶತಕೋಟಿ ಕನಸುಗಳು, ಶತಕೋಟಿ ಭಾವನೆಗಳು ಹಾಗೂ ಬಿಲಿಯನ್ ಸ್ಮೈಲ್ಸ್! ಗುರಿ ಸಾಧಿಸಲಾಗಿದೆ. ವಿಶ್ವಕಪ್ ಗೆದ್ದಿದ್ದೇವೆ. ನಾವು ವಿಶ್ವ ಚಾಂಪಿಯನ್ಸ್. ಹೇ ನಾಯಕ, ನೀವು ಇದನ್ನು ಮಾಡಿದ್ದೀರಿ ಎಂದು ಬಿಸಿಸಿಐ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News