7ನೇ ವಿಕೆಟ್ ಪತನ, ಒತ್ತಡದಲ್ಲಿ ಪಾಕಿಸ್ತಾನ
ಅಹ್ಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಪಾಕ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡದ 7 ವಿಕೆಟ್ ಪತನವಾಗಿದೆ.
ಜವಾಬ್ದಾರಿಯುತ ಆಟವಾಡಿದ ಪಾಕ್ ನಾಯಕ ಬಾಬರ್ ಅಝಮ್ ಭಾರತದ ಬೌಲರ್ ಗಳ ಲಯ ಅರಿತುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿ, ರಕ್ಷಣಾತ್ಮಕ ಆಟ ಪ್ರದರ್ಶಿಸಿದ್ದರು. ಅವರಿಗೆ ಮುಹಮ್ಮದ್ ರಿಝ್ವಾನ್ ಕೂಡ ಉತ್ತಮ ಸಾಥ್ ನೀಡಿದರು. 29.4 ಓವರ್ ಗಳಲ್ಲಿ ಬಾಬರ್ ಅಝಮ್ 50 ರನ್ ಗಳಿಸಿದ್ದಾಗ ಮುಹಮ್ಮದ್ ಸಿರಾಜ್ ಬೌಲಿಂಗ್ ಗೆ ಬೌಲ್ಡ್ ಆದರು. 32.2 ಓವರ್ನಲ್ಲಿ ಸೌದ್ ಶಕೀಲ್ 6 ರನ್ ಗಳಿಸಿ ಕುಲ್ ದೀಪ್ ಯಾದವ್ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. 32.5 ಓವರ್ ನಲ್ಲಿ ಇಫ್ತಿಕಾರ್ ಅಹ್ಮದ್ ಕುಲ್ ದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. 34 ಓವರ್ ನಲ್ಲಿ ಮುಹಮ್ಮದ್ ರಿಝ್ವಾನ್ 49 ರನ್ ಗಳಿಸಿದ್ದಾಗ ಬೂಮ್ರಾ ಎಸೆತದಲ್ಲಿ ಬೌಲ್ಡ್ ಆದರು. 35.2 ಓವರ್ ನಲ್ಲಿ ಶಾದಾಬ್ ಖಾನ್,ಬೂಮ್ರಾ ಎಸೆತದಲ್ಲಿ ಪೆವಿಲಿಯನ್ ಪರೇಡ್ ನಡೆಸಿದರು.
ಭಾರತ ತಂಡದ ಬೌಲರ್ ಗಳ ಉತ್ತಮ ಎಸೆತಕ್ಕೆ ಪಾಕ್ ಬ್ಯಾಟರ್ ಗಳ ರಕ್ಷಣಾತ್ಮಕ ಆಟ ನಡೆಯುತ್ತಿಲ್ಲ. ಮೊದಲು ವೇಗದ ಬೌಲಿಂಗ್ ಎದುರಿಸಿದ್ದ ಪಾಕ್, ಬಳಿಕ ಸ್ಪಿನ್ ಬೌಲಿಂಗ್ ಖೆಡ್ಡಾಕ್ಕೆ ತತ್ತರಿಸುತ್ತಿದೆ. ರನ್ ಗಳಿಸಲು ಪರದಾಟ ನಡೆಸುತ್ತಿದೆ. ಇದುವರೆಗೆ ಒಂದೇ ಒಂದು ಬಾಲ್ ಸಿಕ್ಸರ್ ಗೆ ಹೋಗಿಲ್ಲ. ಪಾಕಿಸ್ತಾನದ ಉತ್ತಮ ರನ್ ಪೇರಿಸುವ ಪ್ರಯತ್ನ, ಭಾರತೀಯ ಬೌಲರ್ ಗಳ ಮಧ್ಯೆ ನಡೆಯುತ್ತಿಲ್ಲ.
ಬೂಮ್ರಾ, ಕುಲ್ ದೀಪ್ ಯಾದವ್, ಮುಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದಿದ್ದಾರೆ.
ಪಾಕಿಸ್ತಾನ ತಂಡ 35.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ.