ಕೊಹ್ಲಿಗೆ ಶ್ರೀಲಂಕಾ ಅಭಿಮಾನಿಯಿಂದ ಉಡುಗೊರೆ

Update: 2023-09-14 17:19 GMT

Photo: twitter/itsDeepakJangid

ಕೊಲಂಬೊ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಎಲ್ಲಾ ದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಈಗ ಏಶ್ಯ ಕಪ್‍ನಲ್ಲಿ ಆಡುತ್ತಿರುವ ಅವರು ಅಮೋಘ ಫಾರ್ಮ್‍ನಲ್ಲಿದ್ದಾರೆ.

ಅವರಿಗೆ ಇತ್ತೀಚೆಗೆ ಶ್ರೀಲಂಕಾದ ಅಭಿಮಾನಿಯೊಬ್ಬರು ಉಡುಗೊರೆಯೊಂದನ್ನು ನೀಡಿದರು. ಅದು ಆ ಅಭಿಮಾನಿಯೇ ಬಿಡಿಸಿದ ಕೊಹ್ಲಿಯ ಚಿತ್ರವಾಗಿತ್ತು.

ತಾನೇ ಬಿಡಿಸಿದ ಕೊಹ್ಲಿಯ ಚಿತ್ರವನ್ನು ಕೊಲಂಬೊದಲ್ಲಿ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಗೆ ನೀಡುವುದನ್ನು ‘ಎಕ್ಸ್’ (ಹಿಂದಿನ ಟ್ವಿಟರ್)ನಲ್ಲಿ ವ್ಯಕ್ತಿಯೊಬ್ಬರು ಹಾಕಿದ ವೀಡಿಯೊದಲ್ಲಿ ಕಾಣಬಹುದಾಗಿದೆ.

ಕೊಹ್ಲಿ ಈ ಏಶ್ಯ ಕಪ್‍ನಲ್ಲಿ, ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ 64.50 ಸರಾಸರಿಯಲ್ಲಿ 129 ರನ್‍ಗಳನ್ನು ಗಳಿಸಿದ್ದಾರೆ. ಅದೂ ಅಲ್ಲದೆ, ಅವರು ಇತ್ತೀಚೆಗೆ 47ನೇ ಏಕದಿನ ಶತಕವನ್ನೂ ಬಾರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News