ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡ ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್

Update: 2023-09-10 05:31 GMT

CocoGauff | Photo: twitter \ @CocoGauff


ವಾಶಿಂಗ್ಟನ್: ಟೆನಿಸ್ ದಂತಕತೆಗಳೆನಿಸಿದ್ದ ಸೆರೆನಾ ಮತ್ತು ವೀನಸ್ ವಿಲಿಯಮ್ಸ್ ಅವರ ಪಂದ್ಯಗಳನ್ನು ವೀಕ್ಷಿಸಲು ತಂದೆಯ ಜತೆ ಆಗಮಿಸುತ್ತಿದ್ದ ಹುಡುಗಿ ಇದೀಗ ತಮ್ಮ 19ನೇ ವಯಸ್ಸಿನಲ್ಲಿ ಯು.ಎಸ್. ಓಪನ್ ಟೆನಿಸ್ ಪ್ರಶಸ್ತಿ ಪಡೆಯುವ ಎತ್ತರಕ್ಕೆ ಬೆಳೆದಿದ್ದಾಳೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ತೀವ್ರ ಹಿನ್ನಡೆಯಿಂದ ಚೇತರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿದ ಅಮೆರಿಕದ ಯುವ ಆಟಗಾರ್ತಿ ಕೊಕೊ ಗೌಫ್ ತಮ್ಮ ಎದುರಾಳಿ ಬೆಲಾರುಸ್ ನ ಅರ್ಯನಾ ಸೆಬಲೆಂಕಾ ಅವರನ್ನು 2 ಗಂಟೆ, 6 ನಿಮಿಷಗಳ ಹೋರಾಟದಲ್ಲಿ 2-6, 6-3, 6-2 ಸೆಟ್ಗಳಿ ಅಂತರದಿಂದ ಸೋಲಿಸಿದ್ದಾರೆ.

ಯು.ಎಸ್. ಓಪನ್ ಸಿಂಗಲ್ಸ್ ಕಿರೀಟಕ್ಕೆ ಮುತ್ತಿಟ್ಟರು. ಗೌಫ್ ಅವರು ಜೀವಮಾನದ ಚೊಚ್ಚಲ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ತನ್ನ ತಂದೆ- ತಾಯಿಯನ್ನು ತಬ್ಬಿಕೊಂಡು ಆನಂದಭಾಷ್ಪ ಸುರಿಸಿದರು. "ನಾನು ಉನ್ನತ ಸಾಧನೆ ಮಾಡಲು ಶಕ್ತಿಮೀರಿ ಪ್ರಯತ್ನಿಸಿದೆ. ನನ್ನ ಉತ್ಸಾಹದ ಕಿಚ್ಚಿಗೆ ನೀರು ಸುರಿದಿದ್ದೇವೆ ಎಂದು ಭಾವಿಸಿದವರಿಗೆ ಪ್ರಾಮಾಣಿಕವಾಗಿ ಹೇಳಬಯಸುವುದೆಂದರೆ ನೀವು ಅದಕ್ಕೆ ಗ್ಯಾಸ್ ನೀಡಿದ್ದೀರಿ. ನಿಜವಾಗಿಯೂ ಈಗ ಅದು ಪ್ರಖರವಾಗಿ ಉರಿಯುತ್ತಿದೆ" ಎಂದು ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ 12 ಪಂದ್ಯಗಳನ್ನು ಗೆದ್ದಿರುವ ಗೌಫ್ ಹೇಳಿದ್ದಾರೆ.

ಸೆರೆನಾ ವಿಲಿಯಮ್ಸ್ 1999ರಲ್ಲಿ ದೇಶದ ಪ್ರಮುಖ ಟೂರ್ನಿ ಗೆದ್ದ ಬಳಿಕ ಈ ಪ್ರಶಸ್ತಿ ಗೆದ್ದ ಮೊಟ್ಟಮೊದಲ ಹದಿಹರೆಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಗೌಫ್ ಪಾತ್ರರಾಗಿದ್ದಾರೆ. ಕಳೆದ ವರ್ಷ ಸೆರೆನಾ ವಿಲಿಯಮ್ಸ್ ಅವರಿಗೆ ಬೀಳ್ಕೊಡುಗೆ ನೀಡಿದ್ದ ನ್ಯೂಯಾರ್ಕ್ ಇದೀಗ ದೊಡ್ಡ ಸಾಧಕಿಯನ್ನು ಸ್ವಾಗತಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News